ಮುಂಬೈ: ಮಹಿಳೆಯರಿಗೆ ಮಗು ಹೇರುವಂತೆ ಬಲವಂತ ಮಾಡುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಪತಿಯ ಒಪ್ಪಿಗೆಯಿಲ್ಲದೇ ಗರ್ಭಪಾತ ಮಾಡಿಸಿರುವುದು ಕ್ರೌರ್ಯ ಎಂಬ ಆಧಾರದಲ್ಲಿ ವಿಚ್ಛೇದನ ಕೋರಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅತುಲ್ ಚಂದೂರ್ಕರ್ ಹಾಗೂ ಊರ್ಮಿಳಾ ಜೋಶಿ ಫಾಲ್ಕೆ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಈ ವೇಳೆ ಕೋರ್ಟ್, "ಸಂವಿಧಾನದ 21ನೇ ವಿಧಿಯ ಅನ್ವಯ ಪ್ರತಿಯೊಬ್ಬ ಮಹಿಳೆಯು ಸಂತಾನೋತ್ಪತ್ತಿ ಆಯ್ಕೆಯ ಹಕ್ಕು ಹೊಂದಿರುತ್ತಾರೆ. ಆದ್ದರಿಂದ ಆಕೆಗೆ ಮಗುವಿಗೆ ಜನ್ಮ ನೀಡುವಂತೆ ಒತ್ತಾಯ ಮಾಡಲಾಗದು. ಏಕೆಂದರೆ ಮಹಿಳೆ ವಿವಾಹದ ನಂತರ ಕೆಲಸ ಮಾಡಲು ಬಯಸಿದರೆ ಅದು ಮಾನಸಿಕ ಕ್ರೌರ್ಯವಾಗುವುದಿಲ್ಲ ಎಂದು ಹೇಳಿರುವ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ.
PublicNext
08/10/2022 08:43 pm