ನವದೆಹಲಿ: ಗರ್ಭಪಾತ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ಮೂಲಕ 51 ವರ್ಷಗಳ ಹಳೇ ಕಾನೂನಿಗೆ ತಿಲಾಂಜಲಿ ನೀಡಿದೆ.
ಹೌದು. ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (ಎಂಟಿಪಿ) ಪ್ರಕರಣದ ತೀರ್ಪನ್ನು ನೀಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಗುರುವಾರದಂದು ಮಹಿಳೆಯರಿಗೆ ಮಹತ್ವದ ತೀರ್ಪು ನೀಡಿದೆ. "ಎಲ್ಲ ಮಹಿಳೆಯರೂ ಸ್ವ-ಇಚ್ಛೆಯಿಂದ ಗರ್ಭಪಾತದ ಆಯ್ಕೆ ಮಾಡಿಕೊಳ್ಳಲು ಅರ್ಹರು" ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ.
ಎಂಟಿಪಿ ಕಾಯ್ದೆ ಅಡಿ ಗರ್ಭಪಾತ ಮಾಡಿಕೊಳ್ಳಲು ಅವಿವಾಹಿತ ಮಹಿಳೆಯರಿಗೂ ಹಕ್ಕು ಇದೆ. ಭಾರತದಲ್ಲಿನ ಗರ್ಭಪಾತ ಕಾಯ್ದೆ ಅಡಿಯಲ್ಲಿ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರ ನಡುವೆ ವ್ಯತ್ಯಾಸ ಮಾಡಿಲ್ಲ. ವಿವಾಹಿತ ಮತ್ತು ಅವಿವಾಹಿತ ಮಹಿಳೆಯರು ವೈದ್ಯಕೀಯ ಗರ್ಭಪಾತ ತಿದ್ದುಪಡಿ ಮಸೂದೆ ಮತ್ತು ನಿಯಮಗಳ ಅಡಿಯಲ್ಲಿ ಗರ್ಭಪಾತ ಮಾಡಿಸಬಹುದಾದ ಹಕ್ಕನ್ನು 24 ವಾರಗಳವರೆಗೂ ಹೊಂದಿರುತ್ತಾರೆ ಅಂತ ಕೋರ್ಟ್ ಹೇಳಿದೆ.
PublicNext
30/09/2022 09:12 am