ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಅಲ್ ಖೈದಾ ಅಂಗಸಂಸ್ಥೆ ಅನ್ಸರ್ ಘಜ್ವತುಲ್ ಹಿಂದ್ ನ ಇಬ್ಬರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.ಗುಂಡಿನ ದಾಳಿಗೆ ಸಾವನ್ನಪ್ಪಿದ ಫಯಾಜ್ ಕುಮಾರ್ ಮತ್ತು ಓವೈಸ್ ಖಾನ್ ಎಂದು ಗುರುತಿಸಲಾದ ಭಯೋತ್ಪಾದಕರು ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅನಂತ್ ನಾಗ್ ನ ಬಿಜ್ ಬೆಹರಾ ಪ್ರದೇಶದ ತಾಜಿವಾರದಲ್ಲಿ ಅನಂತನಾಗ್ ಪೊಲೀಸರು ಆಕಸ್ಮಿಕವಾಗಿ ಎನ್ ಕೌಂಟರ್ ನಡೆಸಿದ್ದಾರೆ. ಈ ವೇಳೆ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
PublicNext
07/09/2022 10:27 pm