ನವದೆಹಲಿ : ರೋಗಿಗಳ ಸಂಬಂಧಿಕರು ಮತ್ತು ಇತರರ ದಾಳಿಗೆ ತುತ್ತಾಗುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಭದ್ರತೆ ಒದಗಿಸಲು ನಿರ್ದೇಶನಗಳನ್ನ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ವೇಳೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವ್ಯಾಪಾರ ಉದ್ಯಮಗಳಂತೆ ಕಾರ್ಯನಿರ್ವಹಿಸುವ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳಿಗೆ ಭದ್ರತೆಯನ್ನ ಒದಗಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎ.ಎಸ್.ಓಕಾ ಅವರ ಪೀಠವು ಖಾಸಗಿ ಆಸ್ಪತ್ರೆಗಳು ವಿಪರೀತ ಶುಲ್ಕವನ್ನ ವಿಧಿಸುತ್ತವೆ. ಹಾಗಾಗಿ ಸ್ವತಃ ಭದ್ರತಾ ಸಮಸ್ಯೆಗಳನ್ನ ತಾವೇ ನೋಡಿಕೊಳ್ಳಬಹುದು.
ಇನ್ನು ಅರ್ಜಿದಾರರ ವಕೀಲರನ್ನ, ಅನೇಕ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳಿಗೆ ಸರ್ಕಾರವು ಹೇಗೆ ಭದ್ರತೆಯನ್ನ ಒದಗಿಸುತ್ತದೆ ಎಂದು ಪ್ರಶ್ನಿಸಿದರು.ಇನ್ನು 'ಸರ್ಕಾರವು ಖಾಸಗಿಯವರಿಗೆ ಭದ್ರತಾ ವ್ಯವಸ್ಥೆಯನ್ನ ಜಾರಿಗೆ ತರುತ್ತದೆ ಎಂದು ನೀವು ನಿರೀಕ್ಷಿಸಲು ಸಾಧ್ಯವಿಲ್ಲ' ಎಂದರು.
PublicNext
07/09/2022 05:25 pm