ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುರುಘಾ ಶ್ರೀ ಅರೆಸ್ಟ್ : ‘ಬಸವ ಶ್ರೀ’ ಪ್ರಶಸ್ತಿ ಹಿಂದಿರುಗಿಸಲು ಸಾಯಿನಾಥ್ ನಿರ್ಧಾರ

ಬೆಂಗಳೂರು: ಮುರುಘಾ ಶ್ರೀ ಬಂಧನದ ಬೆನ್ನಲ್ಲೇ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳು ಪ್ರದಾನ ಮಾಡಿದ ಬಸವಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಲು ಪತ್ರಕರ್ತ ಪಿ.ಸಾಯಿನಾಥ್ ಅವರು ನಿರ್ಧರಿಸಿದ್ದಾರೆ. ‘ಮುರುಘಾ ಶ್ರೀ ವಿರುದ್ಧದ ಆರೋಪ ತಿಳಿದು ವಿಚಲಿತನಾಗಿದ್ದೇನೆ. ಮನಸ್ಸಿಗೆ ನೋವಾಯಿತು. ಮಕ್ಕಳ ಮೇಲಿನ ದೌರ್ಜನ್ಯ ಕೃತ್ಯ ಖಂಡಿಸಲು ಶಬ್ದಗಳು ಸಾಕಾಗುವುದಿಲ್ಲ. ಇವರಿಗೆ ನ್ಯಾಯ ದೊರೆಯಬೇಕು ಎನ್ನುವ ಆಶಯದಿಂದ ಬಸವಶ್ರೀ ಪ್ರಶಸ್ತಿ,ಚೆಕ್ ಮೂಲಕ ನೀಡಲಾದ 5 ಲಕ್ಷ ಹಿಂತಿರುಗಿಸುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸಾಯಿನಾಥ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಪ್ರತಿವರ್ಷ ಮಠದದಿಂದ ಕೊಡಮಾಡಲ್ಪಡುವ ಬಸವಶ್ರೀ ಪ್ರಶಸ್ತಿಗೆ 2017ರಲ್ಲಿ ಸಾಯಿನಾಥ್ ಅವರು ಆಯ್ಕೆಗೊಂಡಿದ್ದರು. ಅದರಂತೆ ಅಕ್ಟೋಬರ್ 25ರಂದು ಶ್ರೀಗಳು ಪ್ರಶಸ್ತಿ ಪ್ರದಾನ ಮಾಡಿದ್ದರು.

Edited By : Nirmala Aralikatti
PublicNext

PublicNext

02/09/2022 09:41 pm

Cinque Terre

41.42 K

Cinque Terre

3

ಸಂಬಂಧಿತ ಸುದ್ದಿ