ತನ್ನ ವಿಶೇಷ ಕಾರ್ಯ ಶಕ್ತಿ, ಗುಣಗಳ ವ್ಯಕ್ತಿತ್ವದಿಂದಲೇ ಹೆಸರು ಮಾಡಿರುವ ನಾಯಿಯೆಂದರೆ ಅದು ಮುಧೋಳ ನಾಯಿ. ಈಗ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಮುಧೋಳ ನಾಯಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ನೀಡುವ ಎಸ್ಪಿಜಿ ಪಡೆಗೆ ಸೇರ್ಪಡೆಯಾಗಿದೆ. ಇದರಿಂದ ರಾಜ್ಯಕ್ಕೆ ಹೆಮ್ಮೆ ಬಂದಿದೆ.
ಈ ಹಿಂದೆ ಮಿಲಿಟರಿ ಸೇರಿದಂತೆ ವಿವಿಧ ರಕ್ಷಣಾ ವಿಭಾಗಕ್ಕೆ ಮುಧೋಳ ನಾಯಿ ಸೇರ್ಪಡೆಯಾಗಿತ್ತು. ಇದೀಗ ಮೋದಿ ಅವರ ಗಮನ ಸೆಳೆದು ಅವರ ವಿಶೇಷ ರಕ್ಷಣಾ ಪಡೆಗೆ ಸೇರ್ಪಡೆಯಾಗಿದೆ.
ಏಪ್ರಿಲ್ 25ರಂದು ಮುಧೋಳದ ತಿಮ್ಮಾಪೂರ ಬಳಿ ಇರುವ ಮುಧೋಳ ಶ್ವಾನ ಸಂಶೋಧನಾ ಮತ್ತು ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದ ವಿಶೇಷ ಭದ್ರತಾ ಪಡೆಯ ತಂಡ, ಪರಿಶೀಲನೆ ನಡೆಸಿ ಬಳಿಕ ಎರಡು ಗಂಡು ಮುಧೋಳ ನಾಯಿಗಳನ್ನ ಪಡೆದುಕೊಂಡು ತೆರಳಿತ್ತು. ನಂತರ ತರಬೇತಿ ನೀಡಿ ಈಗ ಎಸ್ಪಿಜಿ ತಂಡಕ್ಕೆ ಸೇರ್ಪಡೆಗೊಳಿಸಿದ್ದಾರೆ.
PublicNext
18/08/2022 12:07 pm