ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ರಾಪ್ತರಿಗೆ ಪಬ್ ಬಾರ್ ಪ್ರವೇಶ ನಿಷೇಧ ; ಬೆಂಗಳೂರು ಪೊಲೀಸರಿಂದ ಆದೇಶ

ಬೆಂಗಳೂರು: ಬಾರ್ ಮತ್ತು ಪಬ್ ಗಳನ್ನು ನಿಗದಿತ ಸಮಯದಲ್ಲಿ ಬಂದ್ ಮಾಡಬೇಕು ಮತ್ತು ಅಪ್ರಾಪ್ತರಿಗೆ ಪ್ರವೇಶ ನಿಷೇಧಿಸಿ ಬೆಂಗಳೂರು ಪೊಲೀಸರು ಆದೇಶ ಹೊರಡಿಸಿದ್ದಾರೆ.ಬಾರ್ ಮತ್ತು ಪಬ್ ಮಾಲೀಕರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಬೆಂಗಳೂರು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ತಪ್ಪಿದ್ದಲ್ಲಿ ಪಬ್ ಮತ್ತು ಬಾರ್ ಮಾಲೀಕರ ಮೇಲೆ ಕೇಸ್ ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸರು ಪ್ರತಿನಿತ್ಯ ಎಲ್ಲಾ ಪಬ್ ಮತ್ತು ಬಾರ್ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಿಯಮ ಉಲ್ಲಂಘಿಸಿದ ಕೇಂದ್ರ ವಿಭಾಗದ 9 ಪಬ್ ಅಂಡ್ ಬಾರ್ ಮೇಲೆ ಪ್ರಕರಣ ದಾಖಲಾಗಿದೆ. ಪಶ್ಚಿಮ ವಿಭಾಗದಲ್ಲಿ ಒಂದು ಪ್ರಕರಣ ದಾಖಲಾಗಿದೆ.

ಪೂರ್ವ ವಿಭಾಗದಲ್ಲಿ 79 ಪಬ್ ಮತ್ತು ಬಾರ್ ಗಳಲ್ಲಿ ಏಕಕಾಲಕ್ಕೆ ಪರಿಶೀಲನೆ ಮಾಡಲಾಗಿದೆ. ಉತ್ತರ ವಿಭಾಗದಲ್ಲಿ ಒಟ್ಟು 3 ಪ್ರಕರಣ ದಾಖಲಾಗಿದೆ. ಅಗ್ನೇಯ ವಿಭಾಗದಲ್ಲಿ ನಿಯಮ ಉಲ್ಲಂಘಿಸಿದ 2 ಪಬ್ ಮತ್ತು ಬಾರ್ ಮೇಲೆ ಪ್ರಕರಣ ದಾಖಲಾಗಿದೆ.ದಕ್ಷಿಣ ವಿಭಾಗದ 2 ಪಬ್ ಮತ್ತು ಬಾರ್ ಮೇಲೆ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

11/08/2022 01:47 pm

Cinque Terre

18.54 K

Cinque Terre

1