ಬೆಂಗಳೂರು: ಪಿಎಸ್‌ಐ ಪರೀಕ್ಷಾ ಅಕ್ರಮ ಕೇಸ್ ನಲ್ಲಿ ಜೈಲು ಪಾಲಾದ ಅಮೃತ್ ಪೌಲ್ ಜೈಲಿನಲ್ಲಿ ಕೈದಿಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಅಮೃತ್ ಪೌಲ್ ವರ್ತನೆಯಿಂದ ಇಲ್ಲಿದ್ದ ಕೈದಿಗಳಿಗೆ ಈಗ ಸಾಕು ಸಾಕಾಗಿ ಹೋಗಿದೆ.
ಹೌದು. ಅಮೃತ್ ಪೌಲ್ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿಯೇ ಇದ್ದಾರೆ. ಆದರೆ ಸುಮ್ಮನೆ ಇಲ್ಲಿ ಇರ್ತಾನೆ ಇಲ್ಲ. ದಿನವೂ ಒಂದಿಲ್ಲ ಒಂದು ರಾದ್ಧಾಂತ ಮಾಡ್ತಾನೇ ಇದ್ದಾರೆ.
ಅಮೃತ್ ಪೌಲ್ ಖಿನ್ನತೆಯಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕೇನೆ ದಿನವೂ ಚಡಪಡಿಕೆಯಿಂದಲೇ ಜೈಲಿನಲ್ಲಿ ಎಲ್ಲರನ್ನೂ ಬೈದಾಡಿಕೊಂಡು ಓಡಾಡುತ್ತಿದ್ದಾರೆ ಅನ್ನೋ ಮಾಹಿತಿ ಈಗ ಹೊರ ಬಿದ್ದಿದೆ.
PublicNext
08/08/2022 07:35 am