ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಘೋರ ಅಪರಾಧಗಳನ್ನ ರಾಜಿ ಆಧಾರದ ಮೇಲೆ ರದ್ದುಗೊಳಿಸಲು ಸಾಧ್ಯವಿಲ್ಲ!

ನವದೆಹಲಿ: ಒಂದು ಘೋರ ಅಪರಾಧ ಆಗಿದ್ದು, ಅಂತಹ ಅಪರಾಧಿ ಅಥವಾ ದೂರುದಾರ ಇಲ್ಲವೇ ಬಲಿಪಶುವಿನ ಮಧ್ಯೆ ರಾಜಿ ಆಗಿದ್ದರೆ, ಅಂತಹ ಅಪರಾಧಗಳನ್ನ ರದ್ದುಗೊಳಿಸಲು ಸಾಧ್ಯವೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೊಲೆ,ಅತ್ಯಾಚಾರ,ವಧು-ದಹನ ದಂತಹ ಗಂಭೀರ ಅಪರಾಧದಲ್ಲೂ ದುಡ್ಡಿರೋರು ದೂರುದಾರರನ್ನ ಮಾಹಿತಿದಾರರನ್ನ ಖರೀದಿಸಿ ಇತ್ಯರ್ಥ ಮಾಡಿಕೊಳ್ಳುತ್ತಾರೆ. ಈ ಮೂಲಕ ಅಪರಾಧಿಗಳು ಪಾರಾಗಿ ಬಿಡ್ತಾರೆ ಎಂದು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಹಾಗೂ ವಿ.ರಾಮಸುಬ್ರಮಣಿಯನ್ ಪೀಠ ಈ ಒಂದು ತೀರ್ಪು ನೀಡಿದೆ.

ದೂರುದಾರನೊಂದಿಗೆ ಒಪ್ಪಂದದ ಆಧಾರದ ಮೇಲೆ ಮಾತ್ರ ಗಂಭೀರ ಅಪರಾಧಿಗಳಿಗೆ ಸಂಬಂಧಿಸಿದ ಎಫ್‌ಐಆರ್‌ಗಳು ಇಲ್ಲವೇ ದೂರುಗಳನ್ನ ರದ್ದುಗೊಳಿಸೋ ಆದೇಶಗಳು "ಅಪಾಯಕಾರಿ ಪೂರ್ವನಿದರ್ಶನ"ವನ್ನ ರೂಪಿಸುತ್ತದೆ ಅಂತಲೂ ಈ ಪೀಠ ಹೇಳಿದೆ.

Edited By :
PublicNext

PublicNext

31/07/2022 10:02 am

Cinque Terre

25.75 K

Cinque Terre

1

ಸಂಬಂಧಿತ ಸುದ್ದಿ