ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಖಾಸುಮ್ಮನೆ ವಾಹನ ತಡೆಯದಂತೆ DG-IGP ಆದೇಶ

ಬೆಂಗಳೂರು : ಪದೇ ಪದೇ ಜನರಿಂದ ದೂರುಗಳು ಬರುತ್ತಿವೆ ದಾಖಲೆಗಳ ಪರಿಶೀಲನೆಗಾಗಿ ಸುಖಾಸುಮ್ಮನೆ ವಾಹನ ತಡೆಯದಂತೆ ಕರ್ನಾಟಕ DG-IGP ಪ್ರವೀಣ್ ಸೂದ್ ಮತ್ತೊಮ್ಮೆ ಆದೇಶ ಹೊರಡಿಸಿದ್ದಾರೆ.ವಾಹನ ತಡೆಯೋ ವಿಚಾರಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿಗೆ ಆದೇಶ ಹೊರಡಿಸಿರುವ ಪ್ರವೀಣ್ ಸೂದ್ ಅವರು ಸುಖಾಸುಮ್ಮನೆ ವಾಹನಗಳನ್ನ ನಿಲ್ಲಿಸದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಎಸ್ ಪಿಗಳಿಗೆ ಖಡಕ್ ಸೂಚನೆ ನೀಡಿದ್ಧಾರೆ. ಕೇವಲ ಡಾಕ್ಯುಮೆಂಟ್ ಪರಿಶೀಲನೆಗೆ ಗಾಡಿ ನಿಲ್ಲಿಸಬೇಡಿ ಎಂದಿದ್ದಾರೆ.

ಡಾಕ್ಯುಮೆಂಟ್ ಪರಿಶೀಲನೆಗೆ ವಾಹನ ಸವಾರರನ್ನ ನಿಲ್ಲಿಸಬೇಡಿ, ಡ್ರಿಂಕ್ & ಡ್ರೈವ್ ಮಾಡೋರನ್ನ ಮಾತ್ರ ಪರಿಶೀಲನೆ ಮಾಡಿ, ಕಣ್ಣಿಗೆ ಕಾಣುವಂತ ಅಪರಾಧ ಕಂಡು ಬಂದರೆ ಮಾತ್ರ ವಾಹನ ನಿಲ್ಲಿಸಿ, ಪಟ್ಟಣ ಮತ್ತು ಹೆದ್ದಾರಿಗಳಲ್ಲಿ ಎಲ್ಲಾ ಕಡೆ ಈ ಸೂಚನೆ ಅನುಸರಿಸಬೇಕು. ಸೂಚನೆಯನ್ನು ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು.

ಬೆಂಗಳೂರು ಸೇರಿ ಎಲ್ಲಾ ಜಿಲ್ಲೆಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

16/07/2022 11:13 pm

Cinque Terre

35.07 K

Cinque Terre

15

ಸಂಬಂಧಿತ ಸುದ್ದಿ