ಉತ್ತರಾಖಂಡ : ಕಾರವೊಂದರ ನಂಬರ್ ಪ್ಲೇಟ್ ಮೇಲೆ ನೋಂದಣಿ ಸಂಖ್ಯೆಯನ್ನು ಹಿಂದಿಯಲ್ಲಿ ‘ಪಾಪಾ’ ಮಾದರಿಯಲ್ಲಿ ಬರೆದ ಕಾರಿನ ಮಾಲೀಕನಿಗೆ ಉತ್ತರಾಖಂಡ ಪೊಲೀಸರು ದಂಡ ವಿಧಿಸಿದ್ದಾರೆ.
ಇನ್ನು ಟ್ವಿಟರ್ ನಲ್ಲಿ ನಂಬರ್ ಪ್ಲೇಟ್ ನ ಮೊದಲು ಮತ್ತು ನಂತರದ ಚಿತ್ರಗಳನ್ನು ಪೊಲೀಸರು ಹಂಚಿಕೊಂಡಿದ್ದಾರೆ ಮತ್ತು ಟ್ವೀಟ್ ಮೂಲಕ ದೂರನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ.
ಈ ರೀತಿ ಮಾಡಿದರೆ ದಂಡ ವಿಧಿಸಲಾಗುತ್ತದೆ. ಹಾಗೆಯೇ "ಪಾಪಾ ಕೆಹತೇ ಹೈ ಬಡಾ ನಾಮ್ ಕರೇಗಾ, ಗಡಿ ಕಿ ಪ್ಲೇಟ್ ಪರ್ ಪಾಪ ಲಿಖೇಗಾ, ಮಗರ್ ಯೇ ತೊ ಕೋಯಿ ನಾ ಜಾನೇ, ಕಿ ಐಸಿ ಪ್ಲೇಟ್ ಪರ್ ಹೋತಾ ಹೈ ಚಲನ್’ ಹಾಡಿನ ಶೈಲಿಯಲ್ಲಿ ಬರೆದುಕೊಂಡಿದ್ದಾರೆ.
"ಟ್ವಿಟ್ ಮೂಲಕ ದೂರನ್ನು ಸ್ವೀಕರಿಸಿದ ನಂತರ, ಉತ್ತರಾಖಂಡ್ ಪೊಲೀಸರು ವಾಹನ ಮಾಲೀಕರನ್ನು ಟ್ರಾಫಿಕ್ ಕಚೇರಿಗೆ ಕರೆಸಿ, ನಂಬರ್ ಪ್ಲೇಟ್ ಬದಲಾಯಿಸಿ ಮತ್ತು ಮಾಲೀಕರಿಗೆ ದಂಡ ವಿಧಿಸಿದ್ದಾರೆ."
PublicNext
14/07/2022 03:42 pm