ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖಾಸಗಿ ಕಾರ್ಮಿಕರ ನಿವೃತ್ತಿ ವಯಸ್ಸು 60ಕ್ಕೆ ಹೆಚ್ಚಳ: ಸರ್ಕಾರದ ಆದೇಶ ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್

ಧಾರವಾಡ: ಖಾಸಗಿ ಕೈಗಾರಿಕೆ ವಲಯದಲ್ಲಿರುವ ನೌಕರರ ವಯಸ್ಸನ್ನು 58ರಿಂದ 60ಕ್ಕೆ ಏರಿಸುವ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ಎತ್ತಿ ಹಿಡಿದಿದೆ.

ಮಾರ್ಚ್ 28, 2017ರ ಗಜೆಟ್ ಮಾಡಲಾದ ಕರ್ನಾಟಕ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶಗಳ (ತಿದ್ದುಪಡಿ) ನಿಯಮಗಳ ಮಾದರಿ ಸ್ಥಾಯಿ ಆದೇಶಗಳು 2017ರ ಪ್ರಕಾರ ಸರ್ಕಾರ ನಿವೃತ್ತಿ ವಯಸ್ಸು ಏರಿಕೆ ಮಾಡಿದೆ. ಸರ್ಕಾರದ ಆದೇಶ ಪ್ರಶ್ನಿಸಿ ಗ್ರಾಸಿಂ ಇಂಡಸ್ಟ್ರೀಸ್ ಲಿಮಿಟೆಡ್​​ನ ಹರಿಹರ್ ಘಟಕ ಸಲ್ಲಿಸಿದ ಅರ್ಜಿಯನ್ನು ಮಂಗಳವಾರ ಆಲಿಸಿದ ನ್ಯಾಯಪೀಠವು ಪ್ರಮಾಣೀಕೃತ ಆದೇಶಗಳ ಕಲಂ 29ರ ಪ್ರಕಾರ ಕಂಪನಿಯ ನೌಕರರು 60 ವರುಷದವರೆಗೆ ಮುಂದುವರಿಯಬಹುದಾಗಿದೆ ಎಂದು ಹೇಳಿದೆ.

ಈ ಹಿಂದೆಯೂ ಗ್ರಾಸಿಂ ಇಂಡಸ್ಟ್ರೀಸ್ ಲಿಮಿಟೆಡ್ ಸಲ್ಲಿಸಿದ ಅರ್ಜಿಯನ್ನು ಏಕ ಸದಸ್ಯರ ಪೀಠ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಗ್ರಾಸಿಂ ಇಂಡಸ್ಟ್ರೀಸ್ ವಿಭಾಗೀಯ ಪೀಠದ ಮೊರೆ ಹೋಗಿದೆ. ವೈದ್ಯಕೀಯ ಪರೀಕ್ಷೆಗೊಳಡಿಸಿದಾಗ ಅವರು ಮರುಉದ್ಯೋಗ ಮಾಡಲು ಅರ್ಹರು ಅಲ್ಲ ಎಂದು ತೋರಿದಲ್ಲಿ ಅರ್ಜಿಯನ್ನು ವಜಾಗೊಳಿಸಿದ ದಿನಾಂಕವಾದ 2021 ಸೆಪ್ಟೆಂಬರ್ 17ರಂದು ಅಥವಾ ನಂತರ ನಿವೃತ್ತರಾದ ನೌಕರರಿಗೆ ಪೂರ್ತಿ ಸಂಬಳ ಮರುಪಾವತಿ ಮಾಡುವಂತೆ ವಿಭಾಗೀಯ ಪೀಠ ಮೇಲ್ಮನವಿದಾರರರಿಗೆ ನಿರ್ದೇಶಿಸಿದೆ.

ಹಿಂದಿನ ಷರತ್ತಿನ ಅಡಿಯಲ್ಲಿ ಬರುವ ನಿವೃತ್ತರು ಆದರೆ ಮರು ಉದ್ಯೋಗಕ್ಕೆ ಅರ್ಹರು ಅಲ್ಲ ಎಂದಾದರೆ ಅವರಿಗೆ ನಿವೃತ್ತಿಯ ದಿನಾಂಕ ಮತ್ತು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟ ದಿನಾಂಕ ನಡುವಿನ ಅವಧಿಯಲ್ಲಿ ಅವರಿಗೆ ಶೇ 50ರಷ್ಟು ಸಂಬಳ ಮರುಪಾವತಿ ಮಾಡಬೇಕು ಎಂದು ನ್ಯಾಯಪೀಠ ಹೇಳಿದೆ.

ಮಾರ್ಚ್ 17, 2018 ರಂದು ಅಥವಾ ಅದರ ನಂತರ 58 ವರ್ಷಗಳನ್ನು ಪೂರೈಸಿದ ನಂತರ ಸೇವೆಯಿಂದ ನಿವೃತ್ತರಾದ ಅಂತಹ ಉದ್ಯೋಗಿಗಳಿಗೆ, ನಿವೃತ್ತಿ ದಿನಾಂಕ ಮತ್ತು ಅವರು 60 ವರ್ಷಗಳನ್ನು ತಲುಪಿದ ದಿನಾಂಕದ ನಡುವಿನ ಅವಧಿಗೆ ಮೇಲ್ಮನವಿದಾರರು ಶೇ 50 ಮರುಪಾವತಿ ಮಾಡಬೇಕು ಎಂದು ನ್ಯಾಯಪೀಠ ಹೇಳಿದೆ.

Edited By : Vijay Kumar
PublicNext

PublicNext

08/07/2022 02:16 pm

Cinque Terre

52.01 K

Cinque Terre

0

ಸಂಬಂಧಿತ ಸುದ್ದಿ