ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಟಗೆರೆ : ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ ಯುವಕನ ಎರಡೂ ಕಾಲು ಬಲಿ

ಕೊರಟಗೆರೆ : ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ವಿದ್ಯುತ್ ಕಂಬ ನಿಲ್ಲಿಸುವ ಕಾಮಗಾರಿಗಾಗಿ ಬೆಸ್ಕಾಂ ಸೆಕ್ಷನ್ ಆಫೀಸರ್ ಮೂರು ಜನ ಯುವಕರನ್ನು ಕರೆದುಕೊಂಡು ಹೋಗಿದ್ದರು.

ಕಂಬ ನಿಲ್ಲಿಸುವಾಗ ಯುವಕನೋರ್ವನ ಕಾಲಿನ ಮೇಲೆ ಕಂಬ ಬಿದ್ದಿದ್ದರಿಂದ ಆತನ ಎರಡೂ ಕಾಲು ಮುರಿದಿವೆ.

ಈ ದುರ್ಘಟನೆ ಸಂಭವಿಸಿದಾಗ ಬೆಸ್ಕಾಂ ಸೆಕ್ಷನ್ ಆಫೀಸರ್ ವೀರೇಶ್, ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕೇವಲ 20 ಸಾವಿರ ರೂಗಳನ್ನು ಆಸ್ಪತ್ರೆಗೆ ನೀಡಿ ನಾಪತ್ತೆಯಾಗಿದ್ದಾರೆ.

ಸದ್ಯ ಕಾಲು ಮುರಿದುಕೊಂಡ ಯುವಕ ತ್ಯಾಗರಾಜು ಚಿಕಿತ್ಸೆಗಾಗಿ ಒಂದು ಲಕ್ಷಕ್ಕೂ ಅಧಿಕ ಹಣವ್ಯಯ ಮಾಡಿದ್ದು, ಮುಂದಿನ ಚಿಕಿತ್ಸೆಗೆ ಹಣವಿಲ್ಲದೆ ಗೋಳಾಡುತ್ತಿದ್ದಾರೆ.

ಈ ಕುರಿತು ತ್ಯಾಗರಾಜ ದೂರು ನೀಡಲು ಮುಂದಾದಾಗ ಕೊರಟಗೆರೆ ಹಾಗೂ ಕೋಳಾಲ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ.

ಸದ್ಯ ದಿಕ್ಕು ತೋಚದ ತ್ಯಾಗರಾಜ ನ್ಯಾಯ ಬೇಕು ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾನೆ. ಸಂಬಂಧಪಟ್ಟ ಇಲಾಖೆಗಳ ಮೇಲಧಿಕಾರಿಗಳೇ ಈಗಲಾದರೂ ಎಚ್ಚೆತ್ತುಕೊಂಡು ಬಡ ಯುವಕನಿಗೆ ಸಹಾಯ ಮಾಡಿ.

Edited By : Somashekar
PublicNext

PublicNext

06/07/2022 12:41 pm

Cinque Terre

85.52 K

Cinque Terre

0

ಸಂಬಂಧಿತ ಸುದ್ದಿ