ನವದೆಹಲಿ: ಪ್ರವಾದಿ ಮಹಮ್ಮದ್ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾರನ್ನು ತಕ್ಷಣ ಬಂಧಿಸುವಂತೆ ಜಮಾತ್–ಎ– ಇಸ್ಲಾಮಿ ಹಿಂದ್ (ಜೆಐಎಚ್) ಒತ್ತಾಯಿಸಿದೆ.
ಈ ಸಂಬಂಧ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಜೆಐಎಚ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿ, 'ಕ್ಷಮೆ ಯಾಚನೆಯು ಶಿಕ್ಷೆಗೆ ಪರ್ಯಾಯವಾದರೆ, ದೇಶದಲ್ಲಿ ನ್ಯಾಯಾಲಯಗಳು ಮತ್ತು ಜೈಲುಗಳ ಅಗತ್ಯವಿಲ್ಲ. ದೇಶದಲ್ಲಿ ದ್ವೇಷವನ್ನು ಹುಟ್ಟುಹಾಕುತ್ತಿರುವ ರಾಜಕಾರಣಿಗಳು, ಟಿವಿ ಚಾನೆಲ್‌ಗಳು ಹಾಗೂ ಮಾಧ್ಯಮ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು' ಎಂದು ಕೋರಿದ್ದಾರೆ.
ಪ್ರವಾದಿ ಮುಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್ ಶುಕ್ರವಾರ ಕಿಡಿಕಾರಿದ್ದು, ಇಡೀ ದೇಶದ ಕ್ಷಮೆ ಯಾಚಿಸುವಂತೆ ಸೂಚನೆ ನೀಡಿತ್ತು. "ವಾಹಿನಿಯಲ್ಲಿ ನಡೆದ ಚರ್ಚೆಯನ್ನು ನಾವು ನೋಡಿದ್ದೇವೆ. ಆದರೆ ನೂಪುರ್ ಶರ್ಮಾ ಇದನ್ನೆಲ್ಲ ಹೇಳಿದ ರೀತಿ ಮತ್ತು ನಂತರ ತಾನು ವಕೀಲೆ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನೂಪುರ್ ಇಡೀ ದೇಶದ ಕ್ಷಮೆಯಾಚಿಸಬೇಕು" ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದರು.
PublicNext
03/07/2022 07:25 am