ಅಮರಾವತಿ: ಸುಮಾರು 2 ಕೋಟಿ ರೂ. ಮೌಲ್ಯದ ಮದ್ಯವನ್ನು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆ ಒಂಗೋಲ್‌ನಲ್ಲಿ ಸ್ಪೇಷಲ್ ಎನ್ಫೋರ್ಸ್ಮೆಂಟ್ ಬ್ಯೂರೋ ಅಧಿಕಾರಿಗಳು ನಾಶಪಡಿಸಿದ್ದಾರೆ.
2019ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಅಕ್ರಮ ಸಾಗಣೆಯಿಂದ ವಶಪಡಿಸಿಕೊಂಡ ಮದ್ಯದ ಬಾಟಲಿಗಳ ಮೇಲೆ ಎಸ್‌ಪಿ ಮಲಿಕಾ ಗರ್ಗ್ ರೋಡ್ ರೋಲರ್ ಹತ್ತಿಸಿ ನಾಶಪಡಿಸಿದರು. ಈ ಮದ್ಯವು ಗೋವಾ, ತೆಲಂಗಾಣ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಗೆ ಸೇರಿದ್ದಾಗಿದೆ. ಈ ವೇಳೆ ಉಪಸ್ಥಿತರಿದ್ದ ಪ್ರಕಾಶಂ ಜಿಲ್ಲಾ ಎಸ್‌ಪಿ ಮಲಿಕಾ ಗರ್ಗ್, ಮದ್ಯ ಕಳ್ಳಸಾಗಣೆ ಮೇಲೆ ಉಕ್ಕಿನ ಹೆಜ್ಜೆ ಇಡುತ್ತಿದ್ದೇವೆ. ಅಕ್ರಮ ಎಸಗಿರುವುದರ ಬಗ್ಗೆ ಕಂಡು ಬಂದರೆ ನಿರ್ಲಕ್ಷಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದರು.
PublicNext
16/06/2022 02:41 pm