ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪ-ಅಮ್ಮನ ಋಣ ತೀರಿಸಲಾಗದು-ಪೋಷಕರ ತ್ಯಾಗ ಮರೀಬೇಡಿ !

ಬೆಂಗಳೂರು: ಹೈಕೋರ್ಟ್ ನಲ್ಲಿ ಕೇಸ್ ಗಳ ವಿಚಾರಣೆ ನಡೆಯುತ್ತದೆ. ನ್ಯಾಯಾಧೀಶರು ಖಡಕ್ ಆದೇಶಗಳನ್ನೂ ಕೊಡುತ್ತಾರೆ. ಆದರೆ, ಈ ಸಲ ಹೈಕೋರ್ಟ್ ಕಾಳಜಿಯ ಮಾತುಗಳನ್ನ ಆಡಿದೆ. ಮಕ್ಕಳಿಗೆ ಬುದ್ದಿ ಮಾತು ಹೇಳಿದೆ.

ಹೌದು.ತನ್ನ ಕಾಲೇಜಿನ ವ್ಯಾನ್ ಚಾಲಕನನ್ನ 19 ವರ್ಷದ ಮಗಳೊಬ್ಬಳು ಪ್ರೀತಿಸಿದ್ದಳು. ಆತನ ಜೊತೆಗೆ ಓಡಿ ಹೋಗಿ ಮದುವೆ ಕೂಡ ಆಗಿದ್ದಳು. ಈ ಕೇಸ್ ಸಂಬಂಧಿಸಿದಂತೆ ತಂದೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಈಗ ಕಾಳಜಿಯ ಮಾತುಗಳನ್ನ ಹೇಳಿದೆ. ಅವು ಹಿಂಗಿವೆ ಓದಿ: ತಂದೆ-ತಾಯಿಗಿಂತ ದೊಡ್ಡ ದೇವರಿಲ್ಲ.ಮಕ್ಕಳನ್ನ ಬೆಳೆಸಿ ದೊಡ್ಡವರನ್ನಾಗಿಸೋ ತಂದೆ-ತಾಯಿಯ ಋಣವನ್ನ 100 ವರ್ಷವಾದರೂ ತೀರಿಸಲು ಸಾಧ್ಯವೇ ಇಲ್ಲ. ಇಷ್ಟವಾದವರನ್ನ ಮದುವೆ ಆಗಿ ಹೋಗುವ ಮಕ್ಕಳು ತಂದೆ-ತಾಯಿಯ ತ್ಯಾಗವನ್ನ ಮರೆಯಲೇ ಬಾರದು ಎಂದು ಕಾಳಜಿ ಮಾತುಗಳನ್ನ ಹೇಳಿದೆ.

Edited By :
PublicNext

PublicNext

15/06/2022 08:43 am

Cinque Terre

42.54 K

Cinque Terre

8

ಸಂಬಂಧಿತ ಸುದ್ದಿ