ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೂಪುರ್ ವಿರುದ್ಧದ ಪ್ರತಿಭಟನೆಯಲ್ಲಿ ಹಿಂಸಾಚಾರ; ಗಾಯಗೊಂಡಿದ್ದ ಇಬ್ಬರು ಸಾವು

ರಾಂಚಿ: ಪ್ರವಾದಿ ಮೊಹಮ್ಮದರ ಕುರಿತು ಬಿಜೆಪಿಯ ರಾಷ್ಟ್ರೀಯ ಮಾಜಿ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆಯನ್ನ ಖಂಡಿಸಿ ನಿನ್ನೆ (ಶುಕ್ರವಾರ) ದೇಶದ ಹಲವು ಭಾಗಗಳಲ್ಲಿ ನಡೆದ ಹಿಂಸಾಚಾರ ನಡೆದಿತ್ತು. ರಾಂಚಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಅವರನ್ನು ರಾಜೇಂದ್ರ ಇನ್​​ಸ್ಟಿಟ್ಯೂಸ್​ ಆಫ್ ಮೆಡಿಕಲ್ ಸೈನ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ನೂಪುರ್ ಶರ್ಮಾ ಹೇಳಿಕೆಯನ್ನ ಖಂಡಿಸಿ ದೆಹಲಿ, ಉತ್ತರ ಪ್ರದೇಶ, ತೆಲಂಗಾಣ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆ ವೇಳೆ ಕಲ್ಲು ತೂರಾಟ ಸೇರಿದಂತೆ ನಾನಾ ಹಿಂಸಾಚಾರ ನಡೆದಿತ್ತು. ಇನ್ನು ಹಿಂಸಾಚಾರ ಸಂಬಂಧ ಉತ್ತರ ಪ್ರದೇಶದಲ್ಲಿ 227 ಮಂದಿಯನ್ನ ಯೋಗಿ ಆದಿತ್ಯನಾಥ್ ಸರ್ಕಾರ ಬಂಧಿಸಿದೆ.

Edited By : Vijay Kumar
PublicNext

PublicNext

11/06/2022 10:03 am

Cinque Terre

46.98 K

Cinque Terre

36

ಸಂಬಂಧಿತ ಸುದ್ದಿ