ಬೆಂಗಳೂರು: ಅಪರಾಧ ಪ್ರಕರಣಗಳ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸೋ ಅಧಿಕಾರ ಸಬ್ ಇನ್ಸ್ ಪೆಕ್ಟರ್ ಗೂ ಇದೆ ಎಂದು ಹೈಕೋರ್ಟ್ ಹೇಳಿದೆ.
ಪಿಎಸ್ಐಗೆ ದೋಷಾರೋಪಣೆ ಪಟ್ಟಿ ಸಲ್ಲಿಸೋ ಅಧಿಕಾರ ಇಲ್ಲ. ಈ ಕಾರಣಕ್ಕೆ ಜಾಮೀನು ಕೊಡಿಸಿ ಎಂದು ವಾರ ಪತ್ರಿಕೆಯ ಸಂಪಾದಕ ಹಲ್ಲಗೆರೆ ಶಂಕರ್ ಅಳಿಯಂದಿರಾದ ಇ.ಎಸ್.ಪ್ರವೀಣ್ ಕುಮಾರ್ ಮತ್ತು ಈಡಿಗ ಶ್ರೀಕಾಂತ್ ಅರ್ಜಿ ಸಲ್ಲಿಸಿದ್ದರು.
ಆದರೆ, ಕೋರ್ಟ್ ಈ ಅರ್ಜಿಯನ್ನ ವಜಾಗೊಳಿಸಿದ್ದು, ಅಪರಾಧ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಅಧಿಕಾರ ಪಿಎಸ್ಐಗೂ ಇದೆ ಅಂತಲೇ ಹೇಳಿದೆ.
PublicNext
27/05/2022 09:58 am