ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 22‌ ತಿಂಗಳ ಅಧಿಕಾರವಧಿ ತೃಪ್ತಿ ತಂದಿದೆ; ಕಮಲ್ ಪಂತ್ ಇಂಗಿತ

ಬೆಂಗಳೂರು: ನಗರ ಪೊಲೀಸ್ ಆಯುಕ್ತನಾಗಿ 22 ತಿಂಗಳು ಸೇವೆ ಸಲ್ಲಿಸಿದ್ದೇನೆ. ಇದುವರೆಗಿನ ಪೊಲೀಸ್ ಸೇವೆಯಲ್ಲಿ ಕಮಿಷನರ್ ಆಗಿ ಕೆಲಸ ಮಾಡಿರುವುದು ನನಗೆ ಗರಿಷ್ಠ ತೃಪ್ತಿ ತಂದ ಸೇವೆ ಎಂದು ನಿರ್ಗಮಿತ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ನೇಮಕಾತಿ ವಿಭಾಗ ಡಿಜಿಯಾಗಿ ವರ್ಗಾವಣೆ ಆದೇಶ ಹೊರ ಬೀಳುತ್ತಿದ್ದಂತೆ ಪ್ರತಿಕ್ರಿಯಿಸಿದ ಕಮಲ್ ಪಂತ್,

ನಾನು ಸರ್ಕಾರಕ್ಕೆ ಋಣಿಯಾಗಿದ್ದೇನೆ. ಡಿಜಿಯಾದ ಬಳಿಕವೂ ಒಂದು ವರ್ಷ ಮುಂದುವರೆಯಲು ಅವಕಾಶ ನೀಡಿದ್ದಾರೆ. ಪ್ರತಿ ಸಿಬ್ಬಂದಿ ಜತೆಗೆ ಮಹಾನಗರದ ಜನತೆ, ಮಾಧ್ಯಮ ಸಹಕಾರಕ್ಕೂ ವಂದನೆ ಸಲ್ಲಿಸುತ್ತೇನೆ ಎಂದರು.

ಪ್ರತಾಪ್ ರೆಡ್ಡಿ ಸಹ ಸಮರ್ಥ ಅಧಿಕಾರಿಯಾಗಿದ್ದು, ನಾಳೆ ಅಧಿಕಾರ ಸ್ವೀಕರಿಸಬಹುದು.

ಆಯುಕ್ತರಾಗಿ ಎದುರಿಸಿದ ಸವಾಲುಗಳ ಬಗ್ಗೆ ಪ್ರತಿಕ್ರಿಯಿಸಿದ ಪಂತ್, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸೇರಿದಂತೆ ಅನೇಕ ದೊಡ್ಡಮಟ್ಟದ ಅಪರಾಧ ಪ್ರಕರಣಗಳಲ್ಲಿ ನಮ್ಮ ಪೊಲೀಸರು ದಕ್ಷತೆಯಿಂದ ಕೆಲಸ ಮಾಡಿದ್ದಾರೆ.

ಸೈಬರ್ ಕ್ರೈಮ್ ತಡೆಗೆ ಸಿಐಆರ್ ಮಾದರಿ‌ ಜಾರಿಗೆ ತಂದಿದ್ದು, ಇಂದು ದೇಶದಲ್ಲೇ ಸಿಐಆರ್ ಮಾದರಿ ಅನುಸರಿಸಲಾಗುತ್ತಿದೆ.

ಪೊಲೀಸ್ ನೇಮಕಾತಿ ವಿಭಾಗಕ್ಕೆ ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿ, ನಾನು ಈವರೆಗೂ ಅಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವವಿಲ್ಲ. ಹಿರಿಯ ಐಪಿಎಸ್ ಅಧಿಕಾರಿಗಳಾದ ಅಜಯ್ ಸಿಂಗ್, ರಾಘವೇಂದ್ರ ಔರಾಧಕರ್ ಸೇರಿ ಹಲವರು ಕೆಲಸ ಮಾಡಿದ್ದಾರೆ. ಅವರ ಹಾಗೇ ಮುಂದಿನ ದಿನಗಳಲ್ಲಿ ನೇಮಕಾತಿ ವಿಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುವ ವಿಶ್ವಾಸವಿದೆ ಎಂದರು.

ಬಿಟ್ ಕಾಯಿನ್ ಪ್ರಕರಣ ಬಗ್ಗೆ ಗೊಂದಲವಿಲ್ಲ. ಕೇಂದ್ರ ತನಿಖಾ ಸಂಸ್ಥೆ ಮಾಡಬೇಕಾದ ಕೆಲಸವನ್ನ ನಾವು ತನಿಖೆ ಮಾಡಿದ್ದೇವೆ. ಈ ಬಗ್ಗೆ‌‌ ಖುಷಿಯಿದೆ. ಯಾವುದೇ ಆಪಾದನೆ ಒಪ್ಪಲು ಸಾಧ್ಯವಿಲ್ಲ. ಅದೇ ರೀತಿ ಚಂದ್ರು ಕೊಲೆ‌ ಪ್ರಕರಣಕ್ಕೂ ವರ್ಗಾವಣೆಗೂ ಥಳಕು ಹಾಕಬೇಡಿ‌‌ ಎಂದು ಮನವಿ ಮಾಡಿದರು.

Edited By : Shivu K
PublicNext

PublicNext

16/05/2022 10:46 pm

Cinque Terre

48.49 K

Cinque Terre

0

ಸಂಬಂಧಿತ ಸುದ್ದಿ