ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗ 2011 ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ವಿಷಯ ಇನ್ನೂ ಕೊನೆಗೊಂಡಂತೆ ಕಾಣೋದೇ ಇಲ್ಲ ಬಿಡಿ. ಈ ನೇಮಕದ ಸಕ್ರಮ ಅನ್ನೋದನ್ನೆ ಪ್ರಶ್ನಿಸಿ ಪಿಐಎಲ್ ಸಲ್ಲಿಸಲಾಗಿತ್ತು. ಆದರೆ, ಈಗ ಹೈಕೋರ್ಟ್ ಆ ಪಿಐಎಲ್‌ಅನ್ನ ವಜಾಗೊಳಿಸಿದೆ.
2011 ನೇ ಸಾಲಿನ ಈ ನೇಮಕಕ್ಕೆ ಸಂಬಂಧಿಸಿದಂತೆ ಅನೇಕ ವಾದ-ವಿವಾದಗಳು ಇದ್ದೆ ಇವೆ. ಆದರೆ, ಈ ನೇಮಕ ಸಕ್ರಮ ಅಂತಲ ಕೋರ್ಟ್ ಈಗಾಗಲೇ ಹೇಳಿದೆ. ಆದರೂ ಈ ನೇಮಕ ಸಕ್ರಮ ಅಲ್ಲ ಅನ್ನೋ ಹಿನ್ನೆಲೆಯಲ್ಲಿಯೇ ಪಿಐಎಲ್ ಹಕಲಾಗಿತ್ತು.
ಇದನ್ನ ವಜಾಗೊಳಿಸಿದ ಹೈಕೋರ್ಟ್ ಅಂತಿಮ ಆದೇಶಕ್ಕೆ ಒಳಪಟ್ಟ ಷರತ್ತಿನೊಂದಿಗೆ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಪತ್ರ ವಿರಣೆಗೆ ಕರ್ನಾಟಕ ಆಡಳಿತಾತ್ಮಕ ಮಂಡಳಿಗೆ ಅನುಮತಿ ಕೂಡ ನೀಡಿದೆ.
PublicNext
22/04/2022 08:08 am