ನವದೆಹಲಿ: ಅವಿಭಜಿತ ಹಿಂದೂ ಕುಟುಂಬದ ತಂದೆಯ ಅಥವಾ ಪಿತ್ರಾರ್ಜಿತ ಆಸ್ತಿಯನ್ನ ಉಡುಗೊರೆಯಾಗಿ ನೀಡಲು ಬರೋದಿಲ್ಲ ಅಂತಲೇ ಸುಪ್ರೀಂ ಕೋರ್ಟ್ ಹೇಳಿದೆ.
ಆದರೆ, ಈ ಆಸ್ತಿಯನ್ನ ಒಂದ್ ಒಳ್ಳೆ ಕೆಲಸಕ್ಕೆ ಮಾತ್ರ ಉಡುಗೊರೆಯಾಗಿ ನೀಡಲಬಹುದು. ಉದಾಹರಣೆಗೆ ದಾನವಾಗಿ ನೀಡಬಹುದು ಅಂತಲೇ ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹಾಗೂ ನ್ಯಾಯಮೂರ್ತಿ ಕೃಷ್ಣ ಮುರಾರಿ ಪೀಠವು ಈ ಆದೇಶ ನೀಡಿದ್ದು, ಧಾರ್ಮಿಕ ಇಲ್ಲವೇ ಸಾಮಾಜಿಕ ಉದ್ದೇಶಕ್ಕಾಗಿ ಮಾತ್ರ ಪಿತ್ರಾರ್ಜಿತ ಆಸ್ತಿಯನ್ನ ಉಡುಗೊರೆಯಾಗಿ ನೀಡಬಹುದು ಅಂತಲೇ ವಿವರಿಸಿದೆ.
PublicNext
21/04/2022 09:55 am