ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಹೇಳಿಕೆ; ಶ್ರೀರಾಮಸೇನೆಯ ಇಬ್ಬರ ವಿರುದ್ಧ FIR

ರಾಯಚೂರು: ಲವ್ ಜಿಹಾದ್ ಮತ್ತು ಲವ್ ಕೇಸರಿ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಶ್ರೀರಾಮ ಸೇನೆ ಮುಖಂಡ ರಾಜಾಚಂದ್ರ ರಾಮನಗೌಡ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ರಾಯಚೂರಿನ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ವಿರುದ್ಧವೂ ಕೇಸ್ ದಾಖಲಿಸಿಕೊಳ್ಳಲಾಗಿದೆ.

153-ಗಲಭೆ ಸೃಷ್ಟಿಗೆ ಪ್ರಚೋದನೆ, 153(A)-ಕೋಮುಗಳ ನಡುವೆ ವೈರತ್ವ ಮೂಡಿಸುವಂತಹ ಪ್ರಚಾರ, 295-ಉದ್ದೇಶ ಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಎಂದು ಎಫ್‌ಐಆರ್ ದಾಖಲಾಗಿದೆ. ಇದೇ ಏಪ್ರಿಲ್ 10ರಂದು ರಾಯಚೂರು ನಗರದಲ್ಲಿ ನಡೆದಿದ್ದ ಶ್ರೀರಾಮಸೇನೆ ಆಯೋಜಿಸಿದ್ದ ಶ್ರೀ ರಾಮನವಮಿ ಕಾರ್ಯಕ್ರಮದಲ್ಲಿ ಅನ್ಯ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆ ಆರೋಪ. ರಾಜಾಚಂದ್ರ ರಾಮನಗೌಡರಿಂದ ಗಲಭೆ ಉಂಟಾಗುವ ರೀತಿ ಭಾಷಣ ನಡೆದಿದೆ. ಮುಸ್ಲಿಂ ಯುವಕರು, ಹಿಂದೂ ಯುವತಿರನ್ನು ಮದುವೆಯಾಗ್ತಾರೆ. ಅದೇ ರೀತಿ ಹಿಂದೂಗಳು ಮುಸ್ಲಿಂ ಯುವತಿಯರನ್ನು ಮದುವೆಯಾಗಿ ಪ್ರತಿಕಾರ ತೀರಿಸಿಕೊಳ್ಳಬೇಕು ಎಂಬ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಘಿಸಲಾಗಿದೆ.

Edited By : Vijay Kumar
PublicNext

PublicNext

12/04/2022 09:38 am

Cinque Terre

37.96 K

Cinque Terre

19

ಸಂಬಂಧಿತ ಸುದ್ದಿ