ಕೋಲಾರ: ಕೋಲಾರದ ಕ್ಲಾಕ್ ಟವರ್ ಗೆ ಬಿಳಿ ಬಣ್ಣ ಮತ್ತು ರಾಷ್ಟ್ರಧ್ವಜ ಅಳವಡಿಸಿರುವ ಫೋಟೊ, ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹಳೆ ಕ್ಲಾಕ್ ಟವರ್ ಬಣ್ಣದ ಬದಲಿಗೆ ಹೊಸ ಬಿಳಿ ಬಣ್ಣ ಹಾಗೂ ತಿರಂಗದ ಬಳಿಯಲಾಗಿದೆ.
ಕೋಲಾರದ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಕ್ಲಾಕ್ ಟವರ್ ಮೇಲೆ ಹಸಿರು ಬಣ್ಣದ ಬದಲಿಗೆ ರಾಷ್ಟ್ರಧ್ವಜ ಹಾರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಕೋಲಾರ- ಬೆಂಗಳೂರು ರಸ್ತೆ ಮಧ್ಯದ ಕ್ಲಾಕ್ ಟವರ್ ನಗರಸಭೆ ವ್ಯಾಪ್ತಿಗೆ ಬರುತ್ತದೆ. ಈ ಮೊದಲು ಟವರ್ ಒಂದು ಕೋಮಿಗೆ ಸೇರಿದ್ದ ಟವರ್ ಆಗಿ ಬದಲಾಗಿತ್ತು. ಇಡೀ ಟವರ್ ಹಸಿರುಮಯವಾಗಿ ಖಾಸಗಿ ಸೊತ್ತು ಎಂಬಂತಾಗಿತ್ತು!
ಕ್ಲಾಕ್ ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು. ಇಲ್ಲವಾದರೆ ಪ್ರತಿಭಟನೆ ಮಾಡುವುದಾಗಿ ಸಂಸದ ಎಸ್.ಮುನಿಸ್ವಾಮಿ ಜಿಲ್ಲಾಡಳಿತಕ್ಕೆ ತಿಳಿಸಿದ್ದರು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ, ಕ್ಲಾಕ್ ಟವರ್ ಗೆ ಬಿಳಿ ಬಣ್ಣ ಬಳಿದು ರಾಷ್ಟ್ರಧ್ವಜದ ಬಣ್ಣ ಬಳಿಯಲಾಗಿದೆ. ಜಿಲ್ಲಾಧಿಕಾರಿ ವೆಂಕಟರಾಜು, S.P. ಡಿ.ದೇವರಾಜ್ ನೇತೃತ್ವದಲ್ಲಿ ಬಣ್ಣ ಬಳಿದು ತಿರಂಗಾ ಹಾರಿಸಲಾಯ್ತು.
ದಶಕಗಳಿಂದ ಹಸಿರುಮಯವಾಗಿದ್ದ ಕ್ಲಾಕ್ ಟವರ್ ಈಗ ತ್ರಿವರ್ಣ ಧ್ವಜದ ಬಣ್ಣಗಳಿಂದ ಸಿಂಗಾರಗೊಂಡಿದೆ. ಜಿಲ್ಲಾಡಳಿತ ಮುಂಜಾಗ್ರತೆಯಾಗಿ ವಾಹನ ಸಂಚಾರ ಬಂದ್ ಮಾಡಿತ್ತು. ಮಾರ್ಗ ಬದಲಿಸಿದ್ದರಿಂದ ಕೋಲಾರ, ಬೆಂಗಳೂರು ಮಾರ್ಗದ ಕೆಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
PublicNext
19/03/2022 09:22 pm