ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2 ವರ್ಷಗಳ ಬಳಿ ನಿಜಾಮುದ್ದೀನ್ ಮರ್ಕಝ್ ಮಸೀದಿ ಪುನರಾರಂಭ

ನವದೆಹಲಿ: ಎರಡು ವರ್ಷಗಳ ನಂತರ ನಿಜಾಮುದ್ದೀನ್ ಮಸೀದಿ ಸಂಪೂರ್ಣವಾಗಿ ಪುನರ್ ಆರಂಭಕ್ಕೆ ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.

ಕೋವಿಡ್-19 ಸಾಂಕ್ರಾಮಿಕದ ಮಧ್ಯೆ 2020ರ ಮಾರ್ಚ್ ತಿಂಗಳಲ್ಲಿ ತಬ್ಲಿಘಿ ಜಮಾತ್ ಸಮಾವೇಶ ನಡೆದಿದ್ದರಿಂದ ನಿಜಾಮುದ್ದೀನ್ ಮರ್ಕಝ್ ಮಸೀದಿಯನ್ನು ಬಂದ್ ಮಾಡಲಾಗಿತ್ತು. ಶಾಬ್-ಎ-ಬಾರಾತ್ ಹಬ್ಬದ ಹಿನ್ನೆಲೆಯಲ್ಲಿ ನಿಜಾಮುದ್ದೀನ್ ಮರ್ಕಝ್ ಮಸೀದಿಯ ನಾಲ್ಕು ಮಹಡಿಗಳನ್ನು ಪುನಃ ತೆರೆಯಲು ದೆಹಲಿ ಹೈಕೋರ್ಟ್ ಇಂದು (ಬುಧವಾರ) ಅನುಮತಿ ನೀಡಿದೆ.

ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಜನರ ಸಂಖ್ಯೆಯ ಮೇಲಿನ ನಿರ್ಬಂಧಗಳನ್ನು ನ್ಯಾಯಾಲಯ ತೆಗೆದುಹಾಕಿದೆ. ಈ ಹಿಂದೆ ದೆಹಲಿ ಪೊಲೀಸರು ಪ್ರತಿ ಮಹಡಿಯಲ್ಲಿನ ಜನರ ಸಂಖ್ಯೆಯನ್ನು 100ಕ್ಕೆ ಮಿತಿಗೊಳಿಸಿದ್ದರು.

Edited By : Vijay Kumar
PublicNext

PublicNext

16/03/2022 07:58 pm

Cinque Terre

28.01 K

Cinque Terre

138

ಸಂಬಂಧಿತ ಸುದ್ದಿ