ಹೈದ್ರಾಬಾದ್: ಆಂಧ್ರ ಪ್ರದೇಶದ ರಾಜಧಾನಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಇಂದು ಮಹತ್ವದ ತೀರ್ಪನ್ನ ನೀಡಿದೆ.
ಮೂರು ರಾಜಧಾನಿಗಳು, ಸಿಆರ್‌ಡಿಎ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ಕುರಿತು ಹೈಕೋರ್ಟ್ ಈಗ ಮಹತ್ವದ ತೀರ್ಪು ನೀಡಿದ್ದು, ಅಮರಾವತಿಯೇ ಆಂಧ್ರ ಪ್ರದೇಶದ ರಾಜಧಾನಿ. ಇದನ್ನ ಅಭಿವೃದ್ಧಿ ಪಡಿಸಬೇಕು ಎಂದು ಆದೇಶಿಸಲಾಗಿದೆ.
ರೈತರೊಂದಿಗೆ ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ 6 ತಿಂಗಳ ಒಳಗೆ ಮಾಸ್ಟರ್ ಪ್ಲಾನ್ ಪೂರ್ಣಗೊಳಿಸಬೇಕು.ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕಾಲ ಕಾಲಕ್ಕೆ ನ್ಯಾಯಾಲಕ್ಕೆ ವರದಿ ಸಲ್ಲಿಸುತ್ತಿರಬೇಕು ಎಂದು ಹೈಕೋರ್ಟ್ ಹೇಳಿದೆ.
ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದ ತ್ರೀಸದಸ್ಯರ ಪೀಠ ಈ ಆದೇಶ ನೀಡಿದೆ.
PublicNext
03/03/2022 07:15 pm