ಬೆಂಗಳೂರು: ಸವಾರನೋರ್ವ ಹೆಲ್ಮೆಟ್ ಧರಿಸದೇ ಸಂಚಾರ ನಿಯಮ ಉಲ್ಲಂಸಿ ಸ್ಕೂಟಿ ಚಾಲನೆ ಮಾಡಿದ್ದಲ್ಲದೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸರೊಂದಿಗೆ ಕ್ಯಾತೆ ತೆಗೆದ ಸವಾರನ ದ್ವಿಚಕ್ರ ವಾಹನದ ನಂಬರ್ ಪರಿಶೀಲಿಸಿದಾಗ ಸಾಲು ಸಾಲು ದಂಡಗಳ ಪಟ್ಟಿ ಬೆಳಕಿಗೆ ಬಂದಿದೆ. ಈತ ಮೊಬೈಲ್‌ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ, ಹೆಲ್ಮೆಟ್ ಧರಿಸದೇ ಚಾಲನೆ ಸೇರಿ ಒಟ್ಟು 81 ಬಾರಿ ಸಂಚಾರ ನಿಯಮ ಉಲ್ಲಂಸಿದ್ದಾರೆ. ಇದಕ್ಕಾಗಿ ಸವಾರನ ವಿರುದ್ಧ 44 ಸಾವಿರ ರೂ. ದಂಡ ವಿಧಿಸಲಾಗಿದೆ. ಆದರೆ ಈತನು ಈವರೆಗೂ ದಂಡದ ಹಣವನ್ನು ಪಾವತಿಸಿಲ್ಲ ಎನ್ನುವ ವಿಚಾರ ಸದ್ಯ ಬೆಳಕಿಗೆ ಬಂದಿದೆ.
PublicNext
27/02/2022 04:28 pm