ಅಹಮದಾಬಾದ್: ಅಹಮದಾಬಾದ್ ನಲ್ಲಿ 2008 ರಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 49 ಅಪರಾಧಿಗಳ ಪೈಕಿ 38 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಅಹಮದಾಬಾದ್ ನ ವಿಶೇಷ ನ್ಯಾಯಾಲಯ ಶುಕ್ರವಾರ (ಫೆ.18) ಈ ಐತಿಹಾಸಿಕ ತೀರ್ಪು ನೀಡಿದೆ. ಈ ಕೇಸ್ ಗೆ ಸಂಬಂಧಿಸಿದ ಸುಮಾರು 80 ಆರೋಪಿಗಳನ್ನು ವಿಚಾರಣೆ ನಡೆಸಿ 49 ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪು ನೀಡಲಾಗಿದೆ.
28 ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿ, 49 ಅಪರಾಧಿಗಳಲ್ಲಿ 38 ಮಂದಿಗೆ ಮರಣದಂಡನೆ ವಿಧಿಸುವ ಮೂಲಕ 13 ವರ್ಷಗಳ ಹಳೆಯ ಪ್ರಕರಣಕ್ಕೆ ಅಂತ್ಯ ಹೇಳಿದೆ. 2008ರ ಜುಲೈ 26ರಂದು ಕೇವಲ 70 ನಿಮಿಷಗಳ ಅಂತರದಲ್ಲಿ ಅಹಮದಾಬಾದ್ ನಗರದಲ್ಲಿ 21 ಬಾರಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು.
ಸ್ಫೋಟದಲ್ಲಿ 56 ಮಂದಿ ಸಾವಿಗೀಡಾಗಿ, 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
PublicNext
18/02/2022 02:55 pm