ಬೆಂಗಳೂರು: ಹೆಣ್ಣು ಮಕ್ಕಳಿಗೆ ಸೀರೆ ಬಗ್ಗೆ ಅಪಾರ ಪ್ರೀತಿ ಇರುತ್ತದೆ. ಅದೇ ಸೀರೆ ರೇಷ್ಮೆ ಸೀರೆ ಆಗಿದ್ದರೇ ಮುಗಿದೇ ಹೋಯಿತು. ಅದರ ಮೋಹವೇ ಬೇರೆ.ಅದೇ ರೀತಿ ಟೈಲರೊಬ್ಬರು ಮಹಿಳೆಯೊಬ್ಬರ ಸೀರೆಯನ್ನ ಡ್ಯಾಮೇಜ್ ಮಾಡಿಕೊಟ್ಟಿದ್ದರು. ಆ ಟೈಲರ್ ಬರೋಬ್ಬರಿ 2 ವರ್ಷ ಮಹಿಳೆಯ ಕಾನೂನು ಹೋರಾಟ ಎದರುಸಿದ್ದಾರೆ. ಮುಂದೇನ್ ಆಯಿತು. ಹೇಳ್ತಿವಿ ಬನ್ನಿ.
ಬೆಂಗೂರಿನ ನಿವಾಸಿ ಮಂಗಳಾ ಇವಾನಿ ಅನ್ನೋರು 2019 ರಲ್ಲಿ ಮನೆ ಸಮೀಪವೇ ಇದ್ದ ಟೈಲರ್ ದಿವ್ಯಾ ಅವರಿಗೆ ಸೀರೆ ಅಲ್ಟ್ರೇಷನ್‌ಗೆ ನೀಡಿದ್ದರು.
ಆದರೆ ಆ ಸೀರೆಗೆ ಹಾನಿ ಮಾಡಿ ಕೊಟ್ಟಿದ್ದರಿಂದಲೇ ಮಂಗಳಾ ಇವಾನಿ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಸೀರೆ ಓನರ್ ಮಂಗಳಾ ಅವರಿಗೆ ಈಗ ಜಯ ಸಿಕ್ಕಿದೆ. ಎರಡು ವರ್ಷದ ಕಾನೂನು ಹೋರಾಟದಲ್ಲಿ ಟೈಲರ್ ದಿವ್ಯಾ ಸೋತಿದ್ದಾರೆ. ಸೀರೆ ಬೆಲೆ 21,975 ಸೇರಿ 10 ಸಾವಿರ ರೂಪಾಯಿ ದಂಡವನ್ನೂ ಟೈರಲ್ ಈಗ ಕಟ್ಟಬೇಕಿದೆ.
PublicNext
29/01/2022 05:27 pm