ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ನಿ ಮನೆಯಿಂದ ಯಾವುದೇ ದುಬಾರಿ ವಸ್ತು ಪಡೆಯುವುದು ವರದಕ್ಷಿಣೆಗೆ ಸಮ: ಸುಪ್ರೀಂ ಕೋರ್ಟ್

ನವದೆಹಲಿ: ಮನೆ ನಿರ್ಮಾಣಕ್ಕೆ ಪತ್ನಿ ಮನೆಯಿಂದ ಹಣ ಕೇಳುವುದು ಕೂಡ ವರದಕ್ಷಿಣೆಗೆ ಸಮಾನ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ, ಎ.ಎಸ್ ಬೋಪಣ್ಣ ಹಾಗೂ ನ್ಯಾಯಮೂರ್ತಿ ಹಿಮಾ ಕೊಹ್ಲಿಯವರನ್ನು ಒಳಗೊಂಡ ಪೀಠವು ಈ ಅಭಿಪ್ರಾಯ ಪ್ರಕಟಿಸಿದೆ.

ಪತ್ನಿ ಮನೆಯಿಂದ ಪತಿ ಮನೆಯವರು ಹಣ, ಆಸ್ತಿ, ಹೀಗೆ ಯಾವುದೇ ಬೆಲೆ ಬಾಳುವ ಯಾವುದೇ ವಸ್ತುಗಳನ್ನು ಪಡೆದುಕೊಂಡಲ್ಲಿ ಅದು ವರದಕ್ಷಿಣೆ ಕಿರುಕುಳ ಪ್ರಕರಣ ವ್ಯಾಪ್ತಿಯಲ್ಲಿಯೇ ಬರಲಿದೆ ಎಂದು ಪೀಠ ಹೇಳಿದೆ.

ಕೆಲವು ವರದಕ್ಷಿಣೆ ಪ್ರಕರಣಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ. ಮನೆ ನಿರ್ಮಾಣಕ್ಕೆ ಪತ್ನಿ ಮನೆಯಿಂದ ಹಣ ಕೇಳಿದರೆ ಅದು ವರದಕ್ಷಿಣೆ ಅಲ್ಲ ಎಂದು ಇತ್ತೀಚಿಗೆ ಮಧ್ಯಪ್ರದೇಶ ಹೈಕೋರ್ಟ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Edited By : Nagaraj Tulugeri
PublicNext

PublicNext

12/01/2022 04:44 pm

Cinque Terre

51.28 K

Cinque Terre

2

ಸಂಬಂಧಿತ ಸುದ್ದಿ