ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಂಗ್ ಕಮಾಂಡರ್ ಅಭಿನಂದನ್ ರೀತಿ ಮೀಸೆ ಬಿಟ್ಟ ಕಾನ್ಸ್‌ಟೇಬಲ್‌ ಅಮಾನತು

ಭೋಪಾಲ್: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಂತೆ ಮೀಸೆ ಬೆಳೆಸಿದ್ದಕ್ಕಾಗಿ ಮಧ್ಯಪ್ರದೇಶದ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ.

ರಾಕೇಶ್ ರಾಣಾ ಅಮಾನತಾದ ಕಾನ್ಸ್​​ಟೇಬಲ್. ಕಾನ್ಸ್‌ಟೇಬಲ್ ರಾಕೇಶ್ ರಾಣಾ ಅವರನ್ನು ರಾಜ್ಯ ಪೊಲೀಸ್‌ನ ಸಾಗಾಟ ಘಟಕಕ್ಕೆ ಚಾಲಕನನ್ನಾಗಿ ನೇಮಕ ಮಾಡಲಾಗಿತ್ತು. ಅವರಿಗೆ ಮೀಸೆ ಕತ್ತರಿಸುವಂತೆ ಸೂಚಿಸಲಾಗಿತ್ತು. ಆದರೆ ಅವರು ಆದೇಶ ಪಾಲಿಸಲು ವಿಫಲರಾಗಿದ್ದರು. ನಂತರ ಅವರನ್ನು ಕೂಡಲೇ ಆದೇಶಕ್ಕೆ ಬರುವಂತೆ ಅಮಾನತುಗೊಳಿಸಲಾಗಿದೆ.

ರಾಣಾ ಅವರ ಮೀಸೆ ಇತರ ಉದ್ಯೋಗಿಗಳಲ್ಲಿ ನಕಾರಾತ್ಮಕ ಭಾವನೆ ಮೂಡಿಸುತ್ತದೆ ಎಂದು ಆದೇಶ ಹೇಳಿದೆ. ಆದರೆ ಮೀಸೆ ಸ್ವಗೌರವದ ವಿಷಯ ಎಂದು ಪ್ರತಿಪಾದಿಸಿರುವ ರಾಣಾ, ಮೀಸೆ ಕತ್ತರಿಸಲು ನಿರಾಕರಿಸಿದ್ದಾರೆ. "ನಾನು ರಜಪೂತ ಹಾಗೂ ನನ್ನ ಮೀಸೆ ನನಗೆ ಹೆಮ್ಮೆ" ಎಂದು ಅವರು ಹೇಳಿದ್ದಾರೆ.

ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲಿಸದೇ ಇರುವ ಕಾರಣಕ್ಕೆ ರಾಣಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಉಪ ಐಜಿ ಪ್ರಶಾಂತ್ ಶರ್ಮಾ ತನ್ನ ಆದೇಶದಲ್ಲಿ ಹೇಳಿದ್ದಾರೆ. ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ ಲೆಟರ್‌ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By : Vijay Kumar
PublicNext

PublicNext

11/01/2022 01:44 pm

Cinque Terre

19.91 K

Cinque Terre

0

ಸಂಬಂಧಿತ ಸುದ್ದಿ