ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜ. 19ರವರೆಗೆ ಪ್ರತಿಭಟನೆಗೆ ಅವಕಾಶ ಇಲ್ಲ: ಎಸ್ಪಿ

ದಾವಣಗೆರೆ: ನಾಳೆಯಿಂದ ಜನವರಿ 19ರವರೆಗೆ ಯಾವುದೇ ಕಾರಣಕ್ಕೂ ಪ್ರತಿಭಟನೆ, ರ್ಯಾಲಿ, ಜಾತ್ರೆ, ಧರಣಿ ನಡೆಸುವಂತಿಲ್ಲ ಎಂದು ಎಸ್ಪಿ ರಿಷ್ಯಂತ್ ಹೇಳಿದ್ದಾರೆ.

ಇನ್ನು ಹರಿಹರದಲ್ಲಿ ಜನವರಿ 14 ರಂದು ಹರಿಹರದಲ್ಲಿ ಹರ ಜಾತ್ರೆ ಇದ್ದು, ಈ ಬಗ್ಗೆ ಕಾರ್ಯಕ್ರಮ ಸಂಘಟಕರ ಗಮನಕ್ಕೆ ತರಲಾಗುವುದು. ಕೋವಿಡ್ ನಿಯಮಾವಳಿ ಪಾಲಿಸಿ ಕಾರ್ಯಕ್ರಮ ನಡೆಸಬೇಕು. ರಾಜ್ಯ ಸರ್ಕಾರವು ಈ ಆದೇಶ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆ ನೀಡಿದ್ದು, ಇದನ್ನು ಪಾಲಿಸಲಾಗುವುದು ಎಂದರು.

ದೇವಸ್ಥಾನಗಳಲ್ಲಿ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕೊಡಲಾಗಿದ್ದು, ಯಾವುದೇ ಹೋಮ, ಹವನ, ಪೂಜೆ ಪುನಸ್ಕಾರ ನಡೆಸಲು ಅನುಮತಿ ಇಲ್ಲ. ಜನರು ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ರಿಷ್ಯಂತ್ ಎಚ್ಚರಿಕೆ ನೀಡಿದರು.

Edited By : Shivu K
PublicNext

PublicNext

05/01/2022 05:40 pm

Cinque Terre

42.1 K

Cinque Terre

0

ಸಂಬಂಧಿತ ಸುದ್ದಿ