ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಡೀ ದಿನ ಬೆಳಗಾವಿ ಕೋರ್ಟ್‌ನಲ್ಲಿದ್ದ ಮಾಜಿ ಐಪಿಎಸ್ ಅಣ್ಣಾಮಲೈ: ಕಾರಣವೇನು?

ಬೆಳಗಾವಿ: ಸಿಂಗಂ ಅಂತಲೇ ಹೆಸರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನಿನ್ನೆ ಬುಧವಾರದಂದು ದಿನದ ಬಹುತೇಕ ಸಮಯವನ್ನು ಬೆಳಗಾವಿಯ ಕೋರ್ಟ್ ಆವರಣದಲ್ಲೇ ಕಳೆದಿದ್ದಾರೆ.

ಯೆಸ್..ಅಂಕೋಲಾ ಉದ್ಯಮಿ ಆರ್.ಎನ್ ನಾಯಕ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬನ್ನಂಜೆ ರಾಜಾ ವಿರುದ್ಧ ಸಾಕ್ಷಿ ಹೇಳಲು ಅಣ್ಣಾಮಲೈ ಬೆಳಗಾವಿ ನ್ಯಾಯಾಲಯಕ್ಕೆ ಬಂದಿದ್ದರು. ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (ಕೋಕಾ) ನ್ಯಾಯಾಲಯಕ್ಕೆ ಹಾಜರಾದ ಅಣ್ಣಾಮಲೈ ಸಾಕ್ಷಿ ನುಡಿದಿದ್ದಾರೆ.

ಇವರೊಂದಿಗೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಎಡಿಜಿಪಿ ಪ್ರತಾಪ್ ರೆಡ್ಡಿ, ಭಾಸ್ಕರ್ ರಾವ್ ಕೂಡ ಕೋರ್ಟಿಗೆ ಹಾಜರಾಗಿ ಸಾಕ್ಷ್ಯ ನುಡಿದಿದ್ದಾರೆ. ಆರ್.ಎನ್ ನಾಯಕ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಬನ್ನಂಜೆ ರಾಜಾ ಸೇರಿ 15 ಆರೋಪಿಗಳ ಮೇಲೆ ಕೋಕಾ ಕೇಸ್ ದಾಖಲಿಸಲಾಗಿತ್ತು.

ಇನ್ನು ನೆಚ್ಚಿನ ಮಾಜಿ ಐಪಿಎಸ್ ಅಧಿಕಾರಿಯನ್ನು ನೋಡಲು ಕೋರ್ಟ್ ಆವರಣದಲ್ಲಿ ಯುವಕರ ದಂಡೇ ನೆರೆದಿತ್ತು.

Edited By : Nagesh Gaonkar
PublicNext

PublicNext

30/12/2021 07:02 pm

Cinque Terre

80.94 K

Cinque Terre

1

ಸಂಬಂಧಿತ ಸುದ್ದಿ