ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊದಲ ಪತ್ನಿಯೊಂದಿಗೆ ಜನಿಸಿದ ಮಗು ಬಯಸಿದ ವ್ಯಕ್ತಿಗೆ 50,000 ದಂಡ ವಿಧಿಸಿದ ಹೈಕೋರ್ಟ್

ಬೆಂಗಳೂರು: ಮೊದಲ ಪತ್ನಿಯೊಂದಿಗಿದ್ದಾಗ ಜನಿಸಿದ ಮಗುವನ್ನು ತನಗೆ ನೀಡಬೇಕೆಂದು ಮನವಿ ಮಾಡಿದ್ದ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್ 50,000 ದಂಡ ವಿಧಿಸಿದೆ.

ಕೌಟುಂಬಿಕ ನ್ಯಾಯಾಲಯವು ತನ್ನ ಮನವಿ ವಜಾ ಮಾಡಿದ್ದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ಈ ತೀರ್ಪು ಪ್ರಕಟಿಸಿದೆ.

ಮೊದಲ ಪತ್ನಿಯೊಂದಿಗೆ ಇರುವ ಮಗು ತನ್ನ ತಾಯಿಯೊಂದಿಗೆ ಇರಲು ಬಯಸಿದೆ. ಪತಿ ದಾಖಲಿಸಿದ ಎಲ್ಲ ದೂರುಗಳನ್ನು ಎದುರಿಸುವುದರ ಜೊತೆಗೆ ಏಕಾಂಗಿಯಾಗಿಯೇ ತಾಯಿ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ತಾಯಿಯು ಮಗುವನ್ನು ಚೆನ್ನಾಗಿ ಬೆಳೆಸುತ್ತಿದ್ದಾರೆ. ಇದೆಲ್ಲದರ ಬಗ್ಗೆ ತಾಯಿ ಹಾಗೂ ಮಗುವಿನಿಂದಿಗೆ ಸಮಾಲೋಚನೆ ಮಾಡಿ ನ್ಯಾಯಾಲಯವು ಈ ತೀರ್ಪು ನೀಡಿದೆ.

ಅಲ್ಲದೆ, ಮೊದಲ ಮದುವೆ ಅಸ್ತಿತ್ವದಲ್ಲಿರುವಾಗಲೇ ಎರಡನೇ ಮದುವೆಯಾಗುವ ಮುಸ್ಲಿಂ ವ್ಯಕ್ತಿಯ ನಡೆಯು ಕ್ರೂರವಾದದ್ದು. ಇದನ್ನು ಆಧರಿಸಿ ಪತ್ನಿಯು ವರನ ಮನೆಯಿಂದ ದೂರ ಉಳಿಯಬಹುದಾಗಿದ್ದು ಆತನಿಂದ ವಿಚ್ಛೇದನವನ್ನೂ ಪಡೆಯಬಹುದು ಎಂದು ಇತ್ತೀಚೆಗೆ ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿಗಳು ಉಲ್ಲೇಖಿಸಿದರು.

ಮುಂದುವರೆದು, ಒಂದು ತಿಂಗಳ ಒಳಗಾಗಿ ಮೊದಲ ಪತ್ನಿಗೆ 50,000 ರೂಪಾಯಿಗಳನ್ನು ಪಾವತಿಸಬೇಕು. ಇಲ್ಲವಾದಲ್ಲಿ ಮಗುವನ್ನು ಭೇಟಿ ಮಾಡಲು ನೀಡಿರುವ ಹಕ್ಕನ್ನು ಅಮಾನತುಗೊಳಿಸಲಾಗುವುದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

Edited By : Nagaraj Tulugeri
PublicNext

PublicNext

23/12/2021 01:09 pm

Cinque Terre

42.06 K

Cinque Terre

5

ಸಂಬಂಧಿತ ಸುದ್ದಿ