ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಸೀದಿಯಲ್ಲಿದ್ದ ಧ್ವನಿವರ್ಧಕ ತೆರವುಗೊಳಿಸಿದ ಬೆಂಗಳೂರು ಪೊಲೀಸ್

ಬೆಂಗಳೂರು:ನಗರದ ಮಸೀದಿಗಳಲ್ಲಿ ಇದ್ದ ಧ್ವನಿವರ್ಧಕಗಳನ್ನ ಪೊಲೀಸರು ಉಚ್ಛ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ತೆರೆವುಗೊಳಿಸಿದ್ದಾರೆ.

ನಿನ್ನೆಯಷ್ಟೆ ಸಿದ್ಧಾಪುರ ವಾರ್ಡ್ 144ನಲ್ಲಿದ್ದ ಧ್ವನಿ ವರ್ಧಕಗಳನ್ನ ತೆರುವುಗೊಳಿಸಲಾಗಿದೆ. ಈ ಸಂಬಂಧದ ರಿಟ್ ಪಿಟಿಷನ್ 4574/2021 ರಲ್ಲಿ ಈ ಬಗ್ಗೆ ವಿಚಾರಣೆ ಇದೆ.

ಆದರೆ ಅರ್ಜಿ ಇತ್ಯರ್ಥ ಆಗುವವರೆಗೂ ನ್ಯಾಯಾಲಯದ ಆದೇಶವನ್ನ ಪೊಲೀಸರು ಪರಿಗಣಿಸಬೇಕಾಗಿದೆ. ವಿಶೇಷ ದಿನಗಳ ಹೊರತು ಪಡಿಸಿ ಬೇರೆ ದಿನಗಳಲ್ಲಿ ಧ್ವನಿವರ್ಧಕಗಳನ್ನ ಬಳಸುವಂತಿಲ್ಲ.

ಹೀಗಾಗಿಯೆ ಮಸೀದಿಗಳಲ್ಲಿದ್ದ ಧ್ವನಿವರ್ಧಕಗಳನ್ನ ತೆರವುಗೊಳಿಸುವಂತೆ ಪೊಲೀಸರು ನೊಟೀಸ್ ನೀಡಿದ್ದಾರೆ. ನಿರ್ಲಕ್ಷ್ಯ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದ್ದಾರೆ.

Edited By :
PublicNext

PublicNext

22/12/2021 11:28 am

Cinque Terre

30.46 K

Cinque Terre

18

ಸಂಬಂಧಿತ ಸುದ್ದಿ