ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು:ದಾನ ಕೊಟ್ಟ ಶಾಲೆ ಜಾಗ ಮರಳಿ ಕೇಳ್ತಿರೋ ಸೊಸೆಯಂದಿರು

ಕೊಡಗು:ದಾನ-ಧರ್ಮ ಅಂತ ಒಂದು ಇದೆ. ಅದನ್ನ ಹಿರಿಯರು ಪಾಲಿಸಿಕೊಂಡು ಬಂದಿದ್ದರು. ಆದರೆ ಇಲ್ಲೊಂದು ಶಾಲೆಗೆ 70 ವರ್ಷದ ಹಿಂದೆ ಶ್ರೀಮಂತ ವ್ಯಕ್ತಿ ಒಬ್ಬರು ಎರಡು ಎಕರೆ ಜಾಗಕೊಟ್ಟಿದ್ದರು. 5 ಸಾವಿರ ವೆಚ್ಚದಲ್ಲಿ ಮೂರು ಕೊಠಡಿಯನ್ನೂ ನಿರ್ಮಿಸಿಕೊಟ್ಟಿದ್ದರು. ಆದರೆ ಇದೇ ಶಾಲೆ ಜಾಗದ ಮೇಲೆ ಈಗ ಸೊಸೆಯಂದಿರ ಕಣ್ಣು ಬಿದ್ದಿದೆ. ದಾನ ಕೊಟ್ಟ ಜಾಗ ನಮ್ಮದು ಎಂದು ಅದನ್ನ ವಾಪಸ್ ಕೇಳ್ತಿದ್ದಾರೆ.

1950 ರಲ್ಲಿ ಕೊಡಗು ಜಿಲ್ಲೆ ಕುಶಾಲನಗರದ ತಾಲೂಕಿನ ವಾಲ್ನೂರಿನ ಹೆಚ್ ಲಿಂಗಪ್ಪ ತಮ್ಮ 2 ಎಕರೆ 49 ಸೆಂಟ್ ಜಾಗವನ್ನ ಊರಿನ ಶಾಲೆಗೆ ಬಿಟ್ಟುಕೊಟ್ಟಿದ್ದರು. ಮೂರು ಕೊಠಡಿಯನ್ನೂ ಕಟ್ಟಿಸಿಕೊಟ್ಟಿದ್ದರು.ಈ ಹಳೆ ಈ ಶಾಲೆಯಲ್ಲಿ ಈಗ ಬುಡಕಟ್ಟು ಜನಾಂಗದ ಮಕ್ಕಳು ಸೇರಿ 172 ಜನ ವಿದ್ಯಾರ್ಥಿಗಳೂ ಓದುತ್ತಿದ್ದಾರೆ.

ಇಂತಹ ಶಾಲೆಯ ಈ ಜಾಗಕ್ಕೆ ಈ ಲಕ್ಷ ಲಕ್ಷ ಬೆಲೆ ಇದೆ. ಸದ್ಯದ ಬೆಲೆಯಂತೆ ಎಕರೆ ಜಾಗಕ್ಕೆ 25-30 ಲಕ್ಷ ಇದೆ. ಅದಕ್ಕೇನೆ ಹೆಚ್.ಲಿಂಗಪ್ಪನವರ ಸೊಸೆಯಂದಿರಾದ ಬೋಜಮ್ಮ,ದಮಯಂತಿ,ಕಮಲಮ್ಮ ಎಲ್ಲರೂ ಶಾಲೆ ಜಾಗ ನಮ್ಮದು.ಇದನ್ನ ನಮಗೆ ವಾಪಸ್ ಕೊಡಿಸಿ ಅಂತಲೇ ಕೋರ್ಟ್ ಮೆಟ್ಟಿಲೇರಿದ್ದಾರೆ.

ದುರಂತ ನೋಡಿ, ಶಾಲೆಯವರು ಈ ಜಾಗವನ್ನ ಇಲಾಖೆ ಹೆಸರಲ್ಲಿ ರಿಜಿಸ್ಟರ್ ಮಾಡಿಸಿಯೇ ಇಲ್ಲ. ಅದಕ್ಕೇನೆ ಈ ಶಾಲೆಯ ದಾಖಲೆಗಳು ಇನ್ನೂ ದಾನದ ರೂಪದಲ್ಲಿಯೇ ಇವೆ. ಅದಕ್ಕಾಗಿಯೇ ಲಿಂಗಪ್ಪನವರ ಸೊಸೆಯಂದಿರು ಕೋರ್ಟ್‌ ಮೊರೆ ಹೋಗಿದ್ದಾರೆ. ಬೆಲೆ ಬಾಳು ಜಾಗವನ್ನ ಪಡೆಯಲು ಮುಂದಾಗಿದ್ದಾರೆ.

Edited By :
PublicNext

PublicNext

12/12/2021 12:02 pm

Cinque Terre

15.97 K

Cinque Terre

0

ಸಂಬಂಧಿತ ಸುದ್ದಿ