ನವದೆಹಲಿ: ಇತ್ತೀಚೆಗೆ ಹೊಸ ಸ್ಕೂಟಿ ಖರೀದಿಸಿದ್ದ ದೆಹಲಿ ಯುವತಿಯೊಬ್ಬಳು ತನ್ನ ದ್ವಿಚಕ್ರ ವಾಹನಕ್ಕೆ ಅಸಾಮಾನ್ಯ ನೋಂದಣಿ ಸಂಖ್ಯೆಯನ್ನು ಪಡೆದಿದ್ದರಿಂದ ಮುಜುಗರಕ್ಕೊಳಗಾಗಿದ್ದಳು. ದೆಹಲಿಯ ಪ್ರಾದೇಶಿಕ ಸಾರಿಗೆ ಕಚೇರಿ ಸ್ಕೂಟಿಗೆ DL 3 SEX ನೋಂದಣಿ ಸಂಖ್ಯೆಯನ್ನು ನಿಗದಿಪಡಿಸಿದೆ. ಈ ನಂಬರ್ ಪ್ಲೇಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಆರ್‌ಟಿಓ ಕಚೇರಿ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು.
ಯುವತಿ ಹಾಗೂ ಯುವತಿಯ ತಂದೆ ಆರ್‌ಟಿಓ, ದೆಹಲಿ ಕಮಿಷನರ್ರನ್ನೂ ಕೂಡ ಭೇಟಿಯಾಗಿ ನಂಬರ್ ಬದಲಿಸಿಕೊಡುವಂತೆ ಕೇಳಿದ್ದರು. ಆದರೆ ಈ ಸರಣಿ ಮೊದಲೇ ನಿರ್ಧರಿತವಾಗಿರುತ್ತದೆ. ಹಾಗಾಗಿ ಅದನ್ನು ಬದಲು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈಗ ಇದೆ ಪ್ರಕರಣದಲ್ಲಿ ಮಹಿಳಾ ಆಯೋಗ ಯುವತಿಯ ಪರ ನಿಂತಿದೆ.
ದೆಹಲಿ ಮಹಿಳಾ ಆಯೋಗವು ಇದಕ್ಕೆ ಸಂಬಂಧಪಟ್ಟಂತೆ ಆರ್ಟಿಒ ಅಧಿಕಾರಿಗೆ ನೋಟಿಸ್ ನೀಡಿದೆ. SEX ಎಂಬ ಸರಣಿಯಿಂದ ಮುಜುಗರ ಉಂಟಾಗುತ್ತಿದ್ದು, ಅದನ್ನು ಬದಲಿಸುವಂತೆ ಒತ್ತಾಯಿಸಿದೆ. ಜೊತೆಗೆ ಆರ್‌ಟಿಓ ಅಧಿಕಾರಿಗಳಿಗೆ ನೋಟಿಸ್ ನೀಡಿದೆ.
PublicNext
05/12/2021 12:55 pm