ಬೆಂಗಳೂರು: ಕಾರ್ಮಿಕ ಇಲಾಖೆ ಉಪ ಆಯುಕ್ತ ಎ.ಹೆಚ್.ಉಮೇಶ್ ಅವರ ಬೆಂಗಳೂರು ಮನೆ ಮತ್ತು ಆಪ್ತರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉಮೇಶ್ ಪ್ರಸ್ತುತ ಯಶವಂತಪುರ ಉಪ ವಿಭಾಗದ ಉಪ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಕುಟುಂಬಸ್ಥರ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ರವಿ ಕುಮಾರ್ ಕಂಚನಹಳ್ಳಿ ಎಂಬವರು ದೂರಿದ್ದರು. ಈ ಸಂಬಂಧ ರಾಮನಗರ ಎಸಿಬಿ ಕಚೇರಿಯಲ್ಲಿ ಎಫ್ಐಆರ್ ಆಗಿತ್ತು. ಇಂದು ಎಸಿಬಿ ಅಧಿಕಾರಿಗಳು ಏಕಾಏಕಿ ಉಮೇಶ್ ಅವರ ಹುಟ್ಟೂರಾದ ರಾಮನಗರದ ಆವರಗೆರೆಯಲ್ಲಿರುವ ಮನೆ ಮೇಲೂ ರೇಡ್ ನಡೆಸಿ ಪರಿಶೀಲನೆ ನಡೆಸಿದ್ದಾರೆ.
PublicNext
26/10/2021 04:06 pm