ಬೆಂಗಳೂರು: ಬೈಕ್ ಕ್ರೇಜ್ ಕಾರ್ ಕ್ರೇಜ್ ಈಗೀನ ಹುಡುಗರಿಗೆ ಜಾಸ್ತಿನೇ ಇರುತ್ತದೆ. ರಸ್ತೆ ಕಂಡರೆ ಸಾಕು, ಬೈಕ್ ಸ್ಪೀಡ್ 80 ದಾಟಿ ಹೋಗುತ್ತದೆ. ಅಷ್ಟು ವೇಗವಾಗಿಯೇ ಸಾಗೋ ಬೈಕರ್ ಗಳಿಗೆ ಬೆಂಗಳೂರು ಎಸಿಪಿ ಸೌಥ್ ಟ್ರಾಫಿಕ್ ಈಗೊಂದು ಸಂದೇಶ ನೀಡಿದೆ. ಅದು ವೀಡಿಯೋ ಒಂದನ್ನ ಟ್ವಿಟರ್ ಅಲ್ಲಿ ಪೋಸ್ಟ್ ಮಾಡೋ ಮೂಲಕ. ನೋಡಿ.
ಟ್ರಾಫಿಕ್ ಟ್ರಾಫಿಕ್ ಟ್ರಾಫಿಕ್. ಎಲ್ಲರಿಗೂ ಟ್ರಾಫಿಕ್ ಒಂದ್ ರೀತಿ ಕಿರಿಕಿರಿನೇ. ಆದರೆ ರೋಡ್ ಇದೆ ಅಂತ ಮನಸೋಯಿಚ್ಚೆ ಸ್ಪೀಡ್ ಆಗಿ ಹೋದ್ರೆ ಆಗೋದು ಖುಷಿ ಅಲ್ಲವೇ ಅಲ್ಲ. ಅಲ್ಲಿ ಆಗೋದು ದುರಂತವೇ ಸರಿ. ಇದನ್ನ ತಪ್ಪಿಸಲೆಂದೇ, ಸ್ಪೀಡ್ ಆಗಿಯೇ ಬೈಕ್ ಓಡಿಸಿ ಕೊನೆಯಲ್ಲಿ ದುರಂತ ಅಂತ್ಯ ಕಾಣೋ ಯುವಕನ ಒಂದು ವೀಡಿಯೋ ಈಗ ಬೆಂಗಳೂರು ಎಸಿಪಿ ಸೌಥ್ ಟ್ರಾಫಿಕ್ ಪೇಜ್ ನಲ್ಲಿ ಪೋಸ್ಟ್ ಆಗಿದೆ. ಈ ವೀಡಿಯೋದ ಮತ್ತು ಪೋಸ್ಟ್ ಉದ್ದೇಶ ಒಂದೇ. ರಸ್ತೆ ಮೇಲೆ ಮನಸೋಯಿಚ್ಚೆ ಬೈಕ್ ಓಡಿಸಬೇಡಿ ಓಡಿಸಿ ಜೀವ ಕಳೆದು ಕೊಳ್ಳಬೇಡಿ ಅನ್ನೋದೇ ಈ ವೀಡಿಯೋದ ಸಂದೇಶ.ನೀವೂ ನೋಡಿ ಹುಷಾರಾಗಿರಿ ಅಷ್ಟೆ.
PublicNext
24/10/2021 08:16 pm