ಬೆಂಗಳೂರು:ರಾಜ್ಯದಲ್ಲಿ ಆನ್ ಲೈನ್ ಗೇಮಿಂಗ್ ಬ್ಯಾನ್ ಆಗಿದೆ. ಸರ್ಕಾರ ಅದನ್ನ ಬ್ಯಾನ್ ಮಾಡಿದೆ. ಆದರೆ ಈಗ ಆನ್ ಲೈನ್ ಕಂಪನಿಗಳು ಸರ್ಕಾರದ ನಿರ್ಧಾರದ ರದ್ದುಗೊಳಿಸಿ ಅಂತಲೇ ಹೈಕೋರ್ಟ್ ಗೆ ರಿಟ್ ಹಾಕಿವೆ. ಆದರೆ ಸರ್ಕಾರ ಪರ ವಕೀಲ್ ರಿಟ್ ಅರ್ಜಿಗೆ ಆಕ್ಷೇಪ ಸಲ್ಲಿಸಲು ಕಾಲಾವಕಾಶ ಕೇಳಿದ್ದಾರೆ. ಅದಕ್ಕೇನೆ ಹೈಕೋರ್ಟ್ ಇದರ ವಿಚಾರಣೆಯನ್ನ ಅಕ್ಟೋಬರ್-27ಕ್ಕೆ ಮುಂದೂಡಿದೆ.
ಆನ್ ಲೈನ್ ಗೇಮಿಂಗ್ ಅನ್ನ ಸರ್ಕಾರ ಕಂಪ್ಲೀಟ್ ನಿಷೇಧ ಮಾಡಿದೆ. ಇದರಿಂದ ಆನ್ ಲೈನ್ ಗೇಮಿಂಗ್ ಕಂಪನಿಗಳು ಈಗ ರಿಟ್ ಹೋಗಿವೆ. ಕ್ರಿಮಿನಲ್ ಕೇಸ್ ಎದುರಿಸೋ ಭೀತಿಯಲ್ಲಿರೋ ಈ ಎಲ್ಲ ಆನ್ ಲೈನ್ ಕಂಪನಿಗಳ ಪರ, ವಕೀಲರಾದ ಅರವಿಂದ ದಾತಾರ್ ಹಾಗೂ
ಸಜನ್ ಪೂವಯ್ಯ ಸೇರಿ ಇನ್ನೂ ಅನೇಕರು ವಾದ ಮಂಡಿಸಿದ್ದಾರೆ. ಸರ್ಕಾರದ ನಿರ್ಧಾರವನ್ನ ರದ್ದುಗೊಳಿಸಿ ಅಂತಲೂ ಕೇಳಿಕೊಂಡಿದ್ದಾರೆ.
ಆದರೆ ಸರ್ಕಾರದ ಪರ ವಕೀಲ ಎಜಿ ಪ್ರಭುಲಿಂಗ್ ನಾವದಗಿ ರಿಟ್ ಅರ್ಜಿಗೆ ಆಕ್ಷೇಪ ಸಲ್ಲಿಸೋಕೆ ಕಲಾವಕಾಶ ನೀಡುವಂತೆ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ಹಾಗಾಗಿಯೇ ವಿಚಾರಣೆ ಅಕ್ಟೋಬರ್-27 ಕ್ಕೆ ಹೋಗಿದೆ.
PublicNext
22/10/2021 10:09 pm