ದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ,ಕಿಸಾನ್ ಮೋರ್ಚಾ ಪ್ರತಿಭಟನೆ ನಡೆಸುತ್ತಿದೆ. ರಸ್ತೆ ತಡೆ ಮತ್ತು ರೈಲು ಮಾರ್ಗ್ ಬಂದ್ ಮಾಡಿಯೂ ಆಕ್ರೋಶ ವ್ಯಕ್ತಪಿಡಿಸಿದೆ. ಆದರೆ ರೈತರ ಈ ನಡೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿರೋ ಸುಪ್ರಿಂ ಕೋರ್ಟ್, ರೈತರ ಬಗೆಗಿನ ಒಂದು ಮಹತ್ವದ ವಿಚಾರವನ್ನ ಹೇಳಿದೆ.
ಕೃಷಿ ಕಾಯ್ದೆ ವಿರೋಧಿಸಿ ರೈತರು ಸಂಯುಕ್ತ ಕಿಸಾನ್ ಮೋರ್ಚಾ ಮೂಲಕ ಕಳೆದ ಒಂದು ವರ್ಷದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ರಸ್ತೆ ತಡೆ ಮಾಡಿದ್ದಾರೆ. ರೈಲು ಮಾರ್ಗಗಳನ್ನೂ ಬಂದ್ ಮಾಡಿಯೂ ಪ್ರತಿಭಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂದ ಅರ್ಜಿ ವಿಚಾರಣೆ ನಡೆಸಿರೋ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಸಿ.ಟಿ.ರವಿಕುಮಾರ್ ಅವರ ಪೀಠವು ಈಗ ಹೀಗೆ ಹೇಳಿದೆ.ರೈತರಿಗೆ ಪ್ರತಿಭಟಿಸೋ ಹಕ್ಕಿದೆ. ಆದರೆ ಅನಿರ್ದಿಷ್ಟಾವಧಿ ರಸ್ತೆ ತಡೆಯೋ ಹಾಗಿಲ್ಲ ಎಂದು ತಿಳಿಸಿದೆ.
PublicNext
22/10/2021 02:45 pm