ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಳುವಾಯ್ತು ಸೆಲ್ಪಿ : ಮಹಿಳಾ ಪೊಲೀಸರಿಗೆ ನೋಟಿಸ್

ಲಕ್ನೊ: ಇಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆಗ್ರಾಕ್ಕೆ ಹೋಗುವ ಮಧ್ಯೆ ಅವರ ಜೊತೆ ಮಹಿಳಾ ಪೊಲೀಸರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಸದ್ಯ ಈ ಸೆಲ್ಪಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಪೊಲೀಸರ ವಿರುದ್ಧ ಪ್ರಾಥಮಿಕ ತನಿಖೆಗೆ ಲಕ್ನೋ ಪೊಲೀಸ್ ಆಯುಕ್ತ ಧ್ರುವ ಕಾಂತ್ ಠಾಕೂರ್ ಆದೇಶಿಸಿದ್ದಾರೆ ಎಂದು ಖಾಸಗಿ ಮಾಧ್ಯಮ ವರದಿ ಮಾಡಿದೆ.

ಮಹಿಳಾ ಪೊಲೀಸರ ವರ್ತನೆ ಪೊಲೀಸ್ ನಿಯಮಾವಳಿಗಳ ಉಲ್ಲಂಘನೆಯಾಗಿದೆಯೇ ಎಂದು ವಿಚಾರಿಸಲು ಕೇಂದ್ರೀಯ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ (ಡಿಸಿಪಿ) ಕೇಳಲಾಗಿದೆ. ಸಂಬಂಧಪಟ್ಟ ಡಿಸಿಪಿಯ ವರದಿಯ ಆಧಾರದ ಮೇಲೆ ಈ ಬಗ್ಗೆ ಆಯುಕ್ತ ಠಾಕೂರ್ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಮಹಿಳಾ ಪೊಲೀಸರೊಂದಿಗೆ ತಾನು ಕ್ಲಿಕ್ಕಿಸಿದ ಚಿತ್ರವೊಂದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದ ಪ್ರಿಯಾಂಕಾ, "ಈ ಫೋಟೋ ಯೋಗಿ ಜೀ (ಉ.ಪ್ರ. ಸಿಎಂ) ಅವರನ್ನು ತುಂಬಾ ಚಿಂತೆಗೀಡು ಮಾಡಿದೆ ಎಂದು ನನಗೆ ತಿಳಿದಿದೆ. ಅವರು ಈ ಪೊಲೀಸ್ ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳಲು ಬಯಸಿದ್ದಾರೆ. ನನ್ನೊಂದಿಗೆ ಚಿತ್ರ ತೆಗೆಸಿಕೊಳ್ಳುವುದು ಅಪರಾಧವಾಗಿದ್ದರೆ ಅದಕ್ಕಾಗಿ ನನಗೂ ಶಿಕ್ಷೆಯಾಗಬೇಕು. ಸರಕಾರವು ಈ ಶ್ರದ್ಧೆ ಹಾಗೂ ನಿಷ್ಠಾವಂತ ಪೊಲೀಸ್ ಮಹಿಳೆಯರ ವೃತ್ತಿಜೀವನವನ್ನು ಹಾಳು ಮಾಡುವುದು ಸೂಕ್ತವಲ್ಲ" ಎಂದು ಬರೆದಿದ್ದಾರೆ.

Edited By : Nirmala Aralikatti
PublicNext

PublicNext

20/10/2021 10:45 pm

Cinque Terre

47.73 K

Cinque Terre

8

ಸಂಬಂಧಿತ ಸುದ್ದಿ