ಬೆಂಗಳೂರು: ಮುಸ್ಲಿಂ ಮದುವೆ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಹಿಂದೂ ವಿವಾಹದ ರೀತಿಯ ಸಂಸ್ಕಾರ ಮುಸ್ಲಿಂ ಮದುವೆಯಲ್ಲಿ ಇಲ್ಲ. ಮುಸ್ಲಿಂ ಮದುವೆ ಒಪ್ಪಂದ ಮಾತ್ರ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.ಮುಸ್ಲಿಂ ಮದುವೆ ಹಲವು ಅರ್ಥಗಳ ಒಪ್ಪಂದವಾಗಿದೆ. ಹಿಂದೂ ವಿವಾಹದಂತೆ ಒಂದು ಸಂಸ್ಕಾರವಲ್ಲ. ಹೀಗಾಗಿ ವಿಚ್ಚೇದನ ವೇಳೆ ಉದ್ಭವಿಸವು ಹಕ್ಕುಗಳು ಹಾಗೂ ಬಾಧ್ಯತೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಅಡೆತಡೆಗಳಿವೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಮುಸ್ಲಿಂ ಮದುವೆಯ ಬಳಿಕ ನಡೆಯುವ ತಲಾಖ್ ಅಥವಾ ವಿಚ್ಚೇದನ ಸಮಸ್ಯೆಯ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಮಸೂದೆ ಜಾರಿಗೆ ತಂದಿದೆ. ತ್ರಿವಳಿ ತಲಾಖ್ ಮಸೂದೆ ಜಾರಿಗೆ ಬರುವ ಮುನ್ನ ಕೋರ್ಟ್ ಮೆಟ್ಟಿಲೇರಿದ ಹಲವು ಪ್ರಕರಣಗಳು ಇನ್ನು ಇತ್ಯರ್ಥಗೊಂಡಿಲ್ಲ.ಎಜಾಜುರ್ ರೆಹಮಾನ್ ಹಾಗೂ ಸಾಯಿರಾ ಬಾನು ಪ್ರಕರಣ ವಿಚಾರ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
1991ರ ನವೆಂಬರ್ 25 ರಂದು ರೆಹಮಾನ್ ಪತ್ನಿ ಸಾಯಿರಾ ಬಾನುಗೆ ತಲಾಖ್ ಮೂಲಕ ವಿಚ್ಚೇದನ ನೀಡಿದ್ದರು. ಮುಸ್ಲಿಂ ಸಂಪ್ರದಾಯದಂತೆ 5,000 ರೂಪಾಯಿ ಮೆಹರ ನೀಡಿ ವಿಚ್ಚೇದನ ಪಡೆದುಕೊಂಡಿದ್ದರು. ಬಳಿಕ ರಹೆಮಾನ್ ಮತ್ತೊಂದು ವಿವಾಹವಾಗಿದ್ದಾರೆ.
ಇತ್ತ ಸಾಯಿರಾ ಬಾನು ಆಗಸ್ಟ್ 24, 2002ರಂದು ನಿರ್ವಹಣೆ ವೆಚ್ಚ ನೀಡಬೇಕು ಎಂದು ಸಿವಿಲ್ ಮೊಕದ್ದಮೆ ಹೊಡಿದ್ದರು. ಸಾಯಿರಾ ಬಾನು ಪ್ರಕರಣ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಮಾಸಿಕ ನಿರ್ವಹಣೆಗೆ ಮಾಸಿಕ 3,000 ರೂಪಾಯಿ ನೀಡಬೇಕು ಎಂದು ಸೂಚಿಸಿತ್ತು.
ಆದೇಶ ರದ್ದುಗೊಳಿಸುವಂತೆ ಕೋರಿದ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ದೀಕ್ಷಿತ್, ಮುಸ್ಲಿಂ ವಿವಾಹ ಒಂದು ಸಂಸ್ಕಾರವಲ್ಲ, ವಿಚ್ಚೇದನದಿಂದ ವಿವಾಹದ ಎಲ್ಲಾ ಕಟ್ಟುಪಾಡುಗಳು ಮುರಿದುಬೀಳುತ್ತದೆ. ಮುಸ್ಲಿಮರ ವಿವಾಹವೂ ಒಪ್ಪಂದವಾಗಿದೆ. ಹೀಗಾಗಿ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
PublicNext
20/10/2021 09:34 pm