ಪಣಜಿ: ಪ್ರವಾಸ ಎಂದೊಡನೆ ತಟ್ಟನೇ ನೆನಪಿಗೆ ಬರುವುದು ಗೋವಾ ಗೋವಾಕ್ಕೆ ಹೋದ ಮೇಲೆ ಕ್ಯಾಸಿನೊಗೆ ಹೋಗದೇ ಬರಲು ಸಾಧ್ಯವೇ… ಆದ್ರೆ ಅದೇ ರಾಜ್ಯದ ಜರಿಗೆ ಕ್ಯಾಸಿನೊಗೆ ಹೋಗಲು ಪರವಾನಿಗೆ ಇಲ್ಲ. ಹೌದು ಗೋವಾ ರಾಜ್ಯದ ಜನತೆಗೆ ಕ್ಯಾಸಿನೊಕ್ಕೆ ಪ್ರವೇಶಾವಕಾಶ ಲಭಿಸುತ್ತಿಲ್ಲ. ಈ ಬೇಧಭಾವ ಸರಿಯಲ್ಲ ಎಂದು ಶುಕ್ರ ಉಜಗಾಂವಕರ್ ರವರು ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಖಂಡಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.
ದಮನ್ ಮತ್ತು ದೀವ್ ಜೂಜು ಖಾಯ್ದೆಗೆ ಅರ್ಜಿದಾರ ಉಜಗಾಂವಕರ್ ರವರು ಆಕ್ಷೇಪವೆತ್ತಿದ್ದರು. ಖಾಯ್ದೆಯನ್ನು ತಿದ್ದುಪಡಿ ಮಾಡಿ ಕ್ಯಾಸಿನೊಕ್ಕೆ ಕೇವಲ ಹೊರ ರಾಜ್ಯದ ಜನರಿಗೆ ಮಾತ್ರ ಜೂಜು ಆಟವಾಡಲು ಪರವಾನಗಿ ನೀಡಲಾಗುತ್ತಿದೆ. ಗೋವಾದ ಜನತೆಗೆ ಪರವಾನಗಿ ನೀಡಲಾಗುತ್ತಿಲ್ಲ. ಇದು ಕಲಂ 14ರ ಸಮಾನ ಹಕ್ಕು ಅಧಿಕಾರದ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯದಲ್ಲಿ ಅರ್ಜಿದಾರರು ಮನವಿ ಮಾಡಿದ್ದರು. ಈ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ.
ಗೋವಾ ಸರ್ಕಾರವು ಖಾಯ್ದೆಯ ತಿದ್ದುಪಡಿ ಮಾಡಿರುವುದರಿಂದ ಗೋವಾ ರಾಜ್ಯದ ಜನರು ಕ್ಯಾಸಿನೊಕ್ಕೆ ತೆರಳಿ ಜೂಜು ಆಡುವುದಕ್ಕೆ ನಿರ್ಬಂಧ ಹೇರಲಾಗಿತ್ತು.
PublicNext
12/10/2021 03:48 pm