ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ ಪೊಲೀಸ್ ರಾಕ್ : ಖಾಕಿ ಬ್ಯಾಂಡ್ ವಾದನಕ್ಕೆ ನೆಟ್ಟಿಗರು ಫಿದಾ

ಮುಂಬೈ : ಪೊಲೀಸರು ಕೇವಲ ಕಾನೂನು ಪಾಲನೆ ಮಾತ್ರವಲ್ಲದೇ ಅವರಲ್ಲಿಯೂ ಅನೇಕ ಪ್ರತಿಭೆಗಳಿವೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಕರ್ತವ್ಯದ ಜೊತೆಗೆ ಅವರಿಗೆ ತಮ್ಮಲ್ಲಿಯ ಪ್ರತಿಭೆಯನ್ನು ಹೊರಹಾಕಲು ಸಾಧ್ಯವಾಗದ ಈ ಸಂದರ್ಭದಲ್ಲಿ ಮುಂಬೈ ಪೊಲೀಸರು ಬ್ಯಾಂಡ್ ವಾದನಕ್ಕೆ ಜನ ಫಿದಾ ಆಗಿದ್ದಾರೆ.

ಹೌದು ಮುಂಬೈ ಪೊಲೀಸ್ ರ ಮ್ಯೂಸಿಕ್ ಬ್ಯಾಂಡ್ ನೆಟ್ಟಿಗರ ಗಮನಸೆಳೆದಿದೆ. ತಮ್ಮ ದೇಶಭಕ್ತಿಯನ್ನು ವ್ಯಕ್ತಪಡಿಸಲು ಹಾಡಿನ ಸಾಹಿತ್ಯವನ್ನು ಉಲ್ಲೇಖಿಸಿರುವ ಮ್ಯೂಸಿಕ್ ಬ್ಯಾಂಡ್ ವಿಡಿಯೊವನ್ನು ಮುಂಬೈ ಪೊಲೀಸ್ ಇಲಾಖೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ.

ಇದು 1986 ರ ಬಾಲಿವುಡ್ ಚಲನಚಿತ್ರ ಕರ್ಮದ ಪ್ರಸಿದ್ಧ ‘ಆಯೆ ವತನ್ ತೇರೆ ಲಿಯೆ’ ಹಾಡಿನ ಮ್ಯೂಸಿಕ್. ಕ್ಲಿಪ್ ಮೂಲ ಹಾಡಿನ ದೃಶ್ಯಗಳೊಂದಿಗೆ ಬ್ಯಾಂಡ್ ನ ಕಾರ್ಯಕ್ಷಮತೆಯನ್ನು ತೋರಿಸುತ್ತದೆ.

ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು 6.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಪೊಲೀಸ್ ಬ್ಯಾಂಡ್ ಗೆ ನೆಟ್ಟಿಗರು ಫಿದಾ ಆಗುದ್ದಾರೆ. ಮಾತ್ರವಲ್ಲದೆ “ಮುಂಬೈ ಪೊಲೀಸ್ ರಾಕ್ ನಾವು ನಿಮ್ಮನ್ನು ಅಭಿನಂದಿಸುತ್ತೇವೆ ಮತ್ತು ಗೌರವಿಸುತ್ತೇವೆ” ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

01/10/2021 03:29 pm

Cinque Terre

36.36 K

Cinque Terre

0

ಸಂಬಂಧಿತ ಸುದ್ದಿ