ದೆಹಲಿ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ 50ರ ಮೀಸಲಾತಿ ಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ.
ಹೊಸದಾಗಿ ಸುಪ್ರೀಂಕೋರ್ಟ್ಗೆ ನೇಮಕಗೊಂಡಿರುವ ಒಂಬತ್ತು ನ್ಯಾಯಮೂರ್ತಿಗಳನ್ನು ಅಭಿನಂದಿಸಲು ಮಹಿಳಾ ವಕೀಲರು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಸಿಗಬೇಕು. ಇದು ಸಾವಿರಾರು ವರ್ಷಗಳ ಶೋಷಣೆಯ ವಿಚಾರ. ನ್ಯಾಯಾಂಗದ ಕೆಳಹಂತದಲ್ಲಿರುವ ನ್ಯಾಯಾಧೀಶರ ಪೈಕಿ ಮಹಿಳಾ ನ್ಯಾಯಾಧೀಶರ ಪ್ರಮಾಣ ಶೇ 30ಕ್ಕಿಂತ ಕಡಿಮೆ. ಹೈಕೋರ್ಟ್ನಲ್ಲಿ ಈ ಪ್ರಮಾಣ ಶೇ 11.5 ಇದ್ದರೆ, ಸುಪ್ರೀಂಕೋರ್ಟ್ನಲ್ಲಿ ಶೇ 11ರಿಂದ 12ರಷ್ಟು ಮಹಿಳೆಯರು ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು. ಕಾನೂನು ಕಾಲೇಜುಗಳಲ್ಲಿಯೂ ವಿದ್ಯಾರ್ಥಿನಿಯರಿಗೆ ಸಮಾನ ಅವಕಾಶ ಸಿಗಬೇಕು. ಇದು ನಿಮ್ಮ ಹಕ್ಕು, ಈ ಬಗ್ಗೆ ಒತ್ತಾಯಿಸುವ ಅವಕಾಶ ನಿಮಗಿದೆ ಎಂದರು.
PublicNext
27/09/2021 08:24 am