ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕತ್ತಲೆಯಲ್ಲೇ 1500 ಕೋಟಿ ರೂ. ಆಸ್ತಿಗೆ ಅಣ್ಣ ಸಹಿ ಹಾಕಿಸಿದ್ರು: ರಾಜಕುಮಾರಿ ಅಂಬಾಲಿಕಾ ದೇವಿ

ಗಾಂಧಿನಗರ: ಗುಜರಾತಿನ ರಾಜ್​ಕೋಟ್​ನ ರಾಜಮನೆತನದ 1500 ಕೋಟಿ ಆಸ್ತಿ ವಿಚಾರದಲ್ಲಿ ಆಸ್ತಿ ವಿವಾದ ಏರ್ಪಟ್ಟಿದೆ. ಈ ವಿಚಾರ ಕೋರ್ಟ್ ಮೆಟ್ಟಿಲೇರಿದೆ.

ರಾಜ್​ಕೋಟ್​ನ ರಾಜಮನೆತನದ ರಾಜ ಮಾಂಧಾತ ಸಿಂಗ್ ಜಡೇಜಾ ಅವರು ಆಸ್ತಿ ಹಂಚಿಕೆ ವಿಚಾರದಲ್ಲಿ ಕಾನೂನು ಹೋರಾಟ ಎದುರಿಸುತ್ತಿದ್ದಾರೆ. ಹೀಗೆ ಆಸ್ತಿ ವಿಚಾರದಲ್ಲಿ ಕೋರ್ಟ್​ ಮೆಟ್ಟಿಲೇರಿರುವುದು ಸಹೋದರಿ ಅಂಬಾಲಿಕಾ ದೇವಿ. ಆಸ್ತಿ ಕಬಳಿಕೆ ವಿಚಾರದಲ್ಲಿ ಇದೀಗ ಉಪವಿಭಾಗದ ನ್ಯಾಯಾಲಯ ನೀಡಿದ ತೀರ್ಪು ಅಂಬಾಲಿಕಾ ಪರವಾಗಿದೆ. ಈ ಮಧ್ಯೆ ರಾಜಕುಮಾರಿ ಅಂಬಾಲಿಕಾ ದೇವಿ ನೀಡಿರುವ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

"ಅಣ್ಣ ತನ್ನನ್ನು ಕತ್ತಲೆಯಲ್ಲಿಟ್ಟು ಸಹಿ ಹಾಕಿಸಿಕೊಂಡ. ತನಗೆ ಅಪ್ಪನ ಆಸ್ತಿಯಲ್ಲಿ ಏನೂ ಬೇಡ ಎಂದು ಬರೆಯುವಂತೆ ಮಾಡಿದ್ದ" ಎಂದು ಅಂಬಾಲಿಕಾ ದೇವಿ ಹೇಳಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ರಾಜ ಮಾಧಾಂತ ಸಿಂಗ್, ಉಪವಿಭಾಗೀಯ ನ್ಯಾಯಾಲಯದ ಆದೇಶವನ್ನು ಕಲೆಕ್ಟರ್​ ಮುಂದೆ ಪ್ರಶ್ನಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಮಧಾಂತ ಸಿಂಗ್​ ಅವರು ಸಿದ್ಧತೆಗಳನ್ನು ಆರಂಭಿಸಿದ್ದಾರೆ.

ಏನಿದು ಪ್ರಕರಣ?:

ಗುಜರಾತಿನ ಮಾಜಿ ಹಣಕಾಸು ಸಚಿವ ಮತ್ತು ರಾಜಕೋಟ್ ರಾಜಕುಮಾರ ಮನೋಹರ್ ಜಡೇಜಾ ಅವರ ಮರಣದ ನಂತರ ಅವರ ಒಡಹುಟ್ಟಿದವರ ನಡುವೆ ಆಸ್ತಿಗೆ ಸಂಬಂಧಿಸಿದಂತೆ ವಿವಾದ ಏರ್ಪಟ್ಟಿದೆ. ರಾಜ ಮಾಂಧಾತ ಸಿಂಗ್ ತನ್ನ ಸಹೋದರನ ಆಸೆಯಂತೆ ತನ್ನ ಸಹೋದರಿ ಅಂಬಾಲಿಕಾ ದೇವಿಗೆ 1.5 ಕೋಟಿ ರೂಪಾಯಿಗಳನ್ನು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ರಾಣಿ ಅಂಬಾಲಿಕಾ ದೇವಿ ತನ್ನ ತಾಯಿ ಹಾಗೂ ಇಬ್ಬರು ಸಹೋದರಿಯರು ಸೇರಿದಂತೆ ನಾಲ್ಕು ಜನರ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ರಾಜಮನೆತನ ಆಸ್ತಿ ವಿವಾದ ಭಾರೀ ಚರ್ಚೆಗೆ ಕಾರಣವಾಗಿದ್ದು, ಮೊದಲ ತೀರ್ಪು ಅಂಬಾಲಿಕಾ ದೇವಿ ಪರವಾಗಿ ಬಂದಿದೆ.

Edited By : Vijay Kumar
PublicNext

PublicNext

26/08/2021 11:00 am

Cinque Terre

53.7 K

Cinque Terre

0

ಸಂಬಂಧಿತ ಸುದ್ದಿ