ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸವಾರನ ಸಮೇತ ಬೈಕ್ ಎತ್ತೊಯ್ದ ಟ್ರಾಫಿಕ್ ಪೊಲೀಸರು.!

ಪುಣೆ: ನೋ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಲಿಸಬೇಡಿ.. ನಿಲ್ಲಿಸಬೇಡಿ ಎಂದರು ಜನ ಮಾತ್ರ ಎರಡ ನಿಮಿಷದ ಕೆಲಸಾ ಅಂತಾ ನೋ ಪಾರ್ಕಿಂಗ್ ಜಾಗದಲ್ಲೇ ಗಾಡಿ ನಿಲ್ಲಿಸುತ್ತಾರೆ. ಅದೇ ರೀತಿ ಪುಣೆಯ ನಾನಾಪೇಠ್ ಪ್ರದೇಶದಲ್ಲಿ ನೋ ಪಾರ್ಕಿಂಗ್ ನಲ್ಲಿ ಜಾಗದಲ್ಲಿದ್ದ ಬೈಕ್ ನ್ನು ಟ್ರಾಫಿಕ್ ಪೊಲೀಸರು ಎತ್ತುವ ಹೊತ್ತಿಗೆ ಸವಾರ ಬೈಕ್ ಮೇಲೆ ಕುಳಿತ್ತಿದ್ದಾನೆ ಈ ವೇಳೆ ಪೊಲೀಸರು ಸವಾರನ ಸಮೇತ ಬೈಕ್ ಎತ್ತಿಕೊಂಡು ಹೋಗಿದ್ದಾರೆ.

ಸದ್ಯ ಘಟನೆಯ ಫೋಟೋಗಳು ವೈರಲ್ ಆಗುತ್ತಿರುತ್ತಿದ್ದಂತೆ ಸಂಚಾರ ವಿಭಾಗದ ಅಧಿಕಾರಿಗಳು ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಟ್ರಾಫಿಕ್ ವಿಭಾಗ ಪ್ರಕಾರ, ಬೈಕ್ ಅನ್ನು 'ನೋ-ಪಾರ್ಕಿಂಗ್ ವಲಯ'ದಲ್ಲಿ ನಿಲ್ಲಿಸಲಾಗಿತ್ತು. ಬೈಕ್ ವಾಹನಕ್ಕೆ ಹಾಕುವಾಗ ಸವಾರ ಉದ್ದೇಶಪೂರ್ವಕವಾಗಿ ಅದರ ಮೇಲೆ ಕುಳಿತುಕೊಂಡಿದ್ದಾನೆ ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಫಿಕ್ ಇಲಾಖೆ ಕಾರ್ಯವೈಖರಿಯ ಬಗ್ಗೆ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬೈಕ್ ನೋ ಪಾರ್ಕಿಂಗ್ ಜಾಗದಲ್ಲಿರಲಿಲ್ಲ, ಎರಡು ನಿಮಿಷಗಳ ಕಾಲ ರಸ್ತೆ ಬದಿಯಲ್ಲಿ ಯುವಕ ನಿಂತಿದ್ದ. ನಾನೇನು ಕಾರ್ ನಿಲ್ಲಿಸಿಲ್ಲ, ತಕ್ಷಣ ಹೊರಡುತ್ತಿದ್ದೇನೆ, ದಯವಿಟ್ಟು ಕ್ರಮ ಕೈಗೊಳ್ಳಬೇಡಿ ಎಂದರೂ ಟ್ರಾಫಿಕ್ ಪೊಲೀಸರು ನಿರಾಕರಿಸಿ ಬೈಕಿನೊಂದಿಗೆ ಯುವಕನನ್ನು ಎತ್ತಿಕೊಂಡರು ಎಂದು ಆರೋಪಿಸಲಾಗಿದೆ.

Edited By : Nirmala Aralikatti
PublicNext

PublicNext

20/08/2021 10:57 pm

Cinque Terre

72.74 K

Cinque Terre

6

ಸಂಬಂಧಿತ ಸುದ್ದಿ