ನಿತ್ಯ ಸೋಸಿಯಲ್ ಮೀಡಿಯಾದಲ್ಲಿ ಹತ್ತಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಅವುಗಳಲ್ಲಿ ಕೆಲವು ಸದಾ ನೆನಪಲ್ಲಿ ಇಡುವಂತಹ ವಿಡಿಯೋಗಳು ಕಾಣ ಸಿಗುತ್ತವೆ ಸದ್ಯ ವೈರಲ್ ಆದ ವಿಡಿಯೋದಲ್ಲಿ ಪೊಲೀಸರು ಆರೋಪಿಯೋರ್ವನನ್ನು ಹಿಡಿದ ಪರಿ ನಿಜಕ್ಕೂ ರೂಚಕವಾಗಿದೆ.
ಹೌದು ಆರೋಪಿಯೋರ್ವನನ್ನು ಹಿಡಿಯಲು ಪೊಲೀಸರು ಹರಸಾಹಸ ಮಾಡಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು.
ಪೊಲೀಸರ ಕೈಯಿಂದ ಪರಾರಿಯಾಗಲು ಆರೋಪಿ ಪ್ರಯತ್ನಪಡುತ್ತಿರುವಾಗ ಸಿನಿಮಿಯ ರೀತಿಯಲ್ಲಿ ಪೊಲೀಸರು ಆತನನ್ನು ಬೆನ್ನಟ್ಟಿ ಬರುತ್ತಾರೆ. ಈ ವೇಳೆ ಬೈಕ್ ಸಮೇತ ಎಸ್ಕೇಫ್ ಆಗಲು ಯತ್ನಿಸುತ್ತಿರುವಾಗ ಕ್ಷಣಾರ್ಧದಲ್ಲಿ ಪೊಲೀಸ್ ಆತನನ್ನು ಹಿಡಿದಿದ್ದಾರೆ.
ಸದ್ಯ ಆರೋಪಿಯನ್ನು ಹಿಡಿಯುತ್ತಿರುವ ಸಂದರ್ಭದಲ್ಲಿಯ ವಿಡಿಯೋ ಬಾರೀ ವೈರಲ್ ಆಗುತ್ತಿದೆ. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ವಿಡಿಯೋ ನಿಕರವಾಗಿ ಎಲ್ಲಿ ನಡೆದಿರುವುದು ಎಂದು ಮಾಹಿತಿ ಇಲ್ಲ..ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಸದ್ದ ಮಾಡುತ್ತಿದೆ.
PublicNext
14/08/2021 10:21 pm