ಶ್ರೀನಗರ: ಐಎಎಸ್ ಅಧಿಕಾರಿ ಟೀನಾ ಡಾಬಿ ಹಾಗೂ ಅಥರ್ ಅಮರ್ ಉಲ್ ಶಫಿ ಖಾನ್ ಅವರ ವೈವಾಹಿಕ ಜೀವನ ವಿಚ್ಛೇದನದಲ್ಲಿ ಅಂತಿಮ ಗೊಂಡಿದೆ. ಜೈಪುರ್ ನ್ಯಾಯಾಲಯ ಈ ಇಬ್ಬರಿಗೆ ವಿಚ್ಛೇದನ ನೀಡಿದೆ. ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿ ಪರಸ್ಪರ ಒಪ್ಪಿ ಕಳೆದ ನವೆಂಬರ್ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
2020ರ ನವೆಂಬರ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2015ರ ಯುಪಿಎಸ್ ಸಿ ಪರೀಕ್ಷೆಯಲ್ಲಿ ಅವರಿಬ್ಬರೂ ಅಗ್ರ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ರಾಜಸ್ಥಾನ ಕೇಡರ್ ಅಧಿಕಾರಿಗಳಾಗಿರುವ ಅವರು, 2018ರಲ್ಲಿ ವಿವಾಹವಾಗಿದ್ದರು.
ಅಥರ್ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಹಿರಿಯ ಅಧಿಕಾರಿ. ಟೀನಾ ಶ್ರೀಗಂಗಾನಗರ ಜಿ.ಪಂ.ಸಿಇಒ
2018ರಲ್ಲಿ ಮದುವೆಯಾದ ಈ ಜೋಡಿಯ ವಿವಾಹ ಭಾರೀ ಸುದ್ದಿಯಾಗಿತ್ತು.ಮೂರು ಆರತಕ್ಷತೆ ಮೂಲಕ ಅದ್ಧೂರಿ ವಿವಾಹವಾಗಿದ್ದ ಈ ಜೋಡಿಯ ಮದುವೆಗೆ ರಾಜಕೀಯ ಗಣ್ಯರಾದ ವೆಂಕಯ್ಯ ನಾಯ್ಡು, ಸುಮಿತ್ರಾ ಮಹಾಜನ್, ರವಿಶಂಕರ್ ಸೇರಿ ಅನೇಕರು ಭಾಗಿಯಾಗಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಇವರ ಹೊಸ ಜೀವನಕ್ಕೆ ಟ್ವೀಟ್ ಮೂಲಕ ಶುಭ ಕೋರಿದ್ದರು.
ಟೀನಾ ಅಂತರ್ಧರ್ಮೀಯ ಮದುವೆಯಾದ ಕುರಿತು ಅನೇಕ ಬಲಪಂಥೀಯ ಸಂಘಟನೆಗಳು ಅಲ್ಲದೇ ಭಾರತೀಯ ಹಿಂದೂ ಮಹಾಸಭಾ ಟೀಕಿಸಿತ್ತು. ಇದೊಂದು ಲವ್ ಜಿಹಾದ್ ಆಗಿದ್ದು, ಈ ಮದುವೆಯನ್ನು ನಿಲ್ಲಿಸಬೇಕು ಎಂದು ಹಿಂದೂ ಮಹಾಸಭಾ ಟೀನಾ ಪೋಷಕರಿಗೆ ಪತ್ರವನ್ನು ಬರೆದಿತ್ತು. ಆದರೆ, ಈ ನಿರ್ಧಾರ ನಮ್ಮ ಮಗಳದು. ಆಕೆ ತಮ್ಮ ಜೀವನದ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರಳು ಎಂದು ಟೀನಾ ಪೋಷಕರು ಸ್ಪಷ್ಟಪಡಿಸಿದ್ದರು.
PublicNext
11/08/2021 10:34 pm