ಟ್ವಿಟರ್ ಇಂಡಿಯಾ ನಿರ್ದೇಶಕನಿಗೆ ರಿಲೀಫ್: ನೋಟಿಸ್ ರದ್ದು ಮಾಡಿದ ಹೈಕೋರ್ಟ್

ಬೆಂಗಳೂರು: ಟ್ವಿಟರ್ ನಲ್ಲಿ ಕೋಮು ಸೌಹಾರ್ದತೆಗೆ ಭಂಗ ತರುವಂತಹ ಸೂಕ್ಷ್ಮ ವಿಡಿಯೋವೊಂದರ ಅಳವಡಿಕೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ರಾಜ್ಯದ ಗಾಜಿಯಾಬಾದ್ನ ಲೊನಿ ಬಾರ್ಡರ್ ಪೊಲೀಸರು ಸಿಆರ್ ಪಿಸಿ ಸೆಕ್ಷನ್ 41 -ಎ ಅಡಿಯಲ್ಲಿ ನೀಡಿದ್ದ ನೋಟಿಸ್ ಅನ್ನು ರಾಜ್ಯ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದ್ದು, ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ನಿರಾಳರಾಗಿದ್ದಾರೆ.

ಅರ್ಜಿದಾರ ಮನೀಶ್ ಮಹೇಶ್ವರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ. ನರೇಂದ್ರ, ಅರ್ಜಿದಾರನು ತಾನು ಆರೋಪಿಯಲ್ಲ ಮತ್ತು ತಮ್ಮಗೆ ನೀಡಿರುವ ನೋಟಿಸ್ ದುರುದ್ದೇಶದಿಂದ ಕೂಡಿದೆ ಎಂದು ಹೇಳಿದ್ದಾರೆ. ಮಹೇಶ್ವರಿ ಸಲ್ಲಿಸಿದ ರಿಟ್ ಅರ್ಜಿಯನ್ನು ಸಮರ್ಥನೀಯ ಎಂದು ನ್ಯಾಯಾಲಯ ಗಮನಿಸಿದೆ. ಸಿಆರ್ ಪಿಸಿಯ ಸೆಕ್ಷನ್ 160 ರ ಅಡಿಯಲ್ಲಿ ಪ್ರಶ್ನಾರ್ಹ ನೋಟಿಸ್ ಅನ್ನು ನೋಟಿಸ್ ಎಂದು ಪರಿಗಣಿಸಿ, ತನಿಖಾಧಿಕಾರಿಗಳು ಬಯಸಿದರೆ ಅರ್ಜಿದಾರರ ಹೇಳಿಕೆಯನ್ನು ವಾಸ್ತವಿಕವಾಗಿ ದಾಖಲಿಸಬಹುದು ಎಂದು ಹೇಳಿದರು.

Public News

Public News

2 months ago

Cinque Terre

21.59 K

Cinque Terre

1

  • stalin hubballi
    stalin hubballi

    👏👏